ಕಾಸರಗೋಡು,ಅ. 21 (DaijiworldNews/HR): ಜಿಲ್ಲೆಯಲ್ಲಿ ಇಂದು 200 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

190 ಮಂದಿಗೆ ಸಂಪರ್ಕದಿಂದ ಸೋಂಕು ತಗಳಿದರೆ. 7 ಮಂದಿ ವಿದೇಶ ಹಾಗೂ ಮೂವರು ಹೊರರಾಜ್ಯಗಳಿಂದ ಆಗಮಿಸಿದವರು ಹಾಗೂ ಓರ್ವ ಆರೋಗ್ಯ ಕಾರ್ಯಕರ್ತನಿಗೆ ಸೋಂಕು ದೃಢಪಟ್ಟಿದೆ.
247 ಮಂದಿ ಗುಣಮುಖರಾಗಿದ್ದಾರೆ. 2789 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ. ಇಂದು ಐದು ಮಂದಿಯು ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಖಚಿತಪಡಿಸಿದ್ದು, ಇದರಿಂದ ಇದುವರೆಗೆ ಒಟ್ಟು ಮೃತಪಟ್ಟವರ ಸಂಖ್ಯೆ 167 ಕ್ಕೆ ತಲಪಿದೆ.
ಇದುವರೆಗೆ ಜಿಲ್ಲೆಯಲ್ಲಿ 17,090 ಮಂದಿಗೆ ಸೋಂಕು ದೃಢಪಟ್ಟಿದ್ದು,14,134 ಮಂದಿ ಗುಣಮುಖರಾಗಿದ್ದಾರೆ. 4672 ಮಂದಿ ನಿಗಾದಲ್ಲಿದ್ದಾರೆ.