ಉಡುಪಿ,ಅ.22 (DaijiworldNews/HR): ಉಡುಪಿ ಸಿಟಿ ಬಸ್ ನಲ್ಲಿ ಮಹಿಳೆಯ ಬ್ಯಾಗ್ ನಿಂದ ಪರ್ಸ್ ಮತ್ತು ಎಟಿಎಂ ಕಾರ್ಡ್ ಗಳನ್ನು ಕಳವು ಗೈದಿದ್ದ ಮೂವರು ಮಹಿಳೆಯರನ್ನು ಉಡುಪಿ ಪೋಲಿಸರು 12 ಗಂಟೆಗಳ ಒಳಗೆ ಬಂಧಿಸಿದ್ದಾರೆ.

ಬಳ್ಳಾರಿಯ ಲತಾ, ಕವಿತಾ, ಸಬಿತಾ ಬೆಂಗಳೂರಿನ ಅರ್ಚನಾ ರಾವ್ ಎಂಬವರು ಬಸ್ಸಿನಲ್ಲಿ ಪ್ರಯಾಣಿಸುವ ಸಂಧರ್ಭದಲ್ಲಿ ಕುಂಜಿಬೆಟ್ಟು ಬಳಿ ಈ ಮೂವರು ಮಹಿಳೆಯರು ಬಸ್ ಹತ್ತಿದ್ದು ಅರ್ಚನಾ ರಾವ್ ಇವರ ಬಳಿಯಲ್ಲಿ ಬಸ್ ನಲ್ಲಿ ನಿಂತುಕೊಂಡಿದ್ದರು. ಇವರ ಬಳಿ ಒಂದು ಮಗು ಕೂಡಾ ಇದ್ದು ಮಗುವನ್ನು ಅರ್ಚನಾ ರಾವ್ ಬಳಿಯಲ್ಲಿ ನೀಡಿದ್ದರು. ಆದರೆ ಇದೇ ಸಂಧರ್ಭದಲ್ಲಿ ಅರ್ಚನಾ ರಾವ್ ಅವರು ಬ್ಯಾಗ್ ನಿಂದ ಎಟಿಎಂ ಕಾರ್ಡ್, ಹಣ ಮತ್ತು ಇನ್ನಿತರ ದಾಖಲೆಗಳು ಇದ್ದ ಪರ್ಸ್ ಅನ್ನು ಈ ಮೂವರು ಮಹಿಳೆಯರು ಲಪಟಾಯಿಸಿದ್ದರು. ಇದರೊಂದಿಗೆ ಎಟಿಎಂ ನಿಂದ ಸುಮಾರು 25 ಸಾವಿರ ರುಪಾಯಿ ಹಣವನ್ನು ಕೂಡಾ ಡ್ರಾ ಮಾಡಿದ್ದರು.
ಈ ಕುರಿತಾಗಿ ಅರ್ಚನಾ ರಾವ್ ಅವರು ಉಡುಪಿ ಪೋಲಿಸ್ ಠಾಣೆಯಲ್ಲಿ ಕೇಸ್ ಅನ್ನು ದಾಖಲಿಸಿದ್ದರು. ತಕ್ಷಣವೇ ಕಾರ್ಯಪ್ರವತ್ತರಾದ ಪೋಲಿಸರು ಜಿಲ್ಲೆಯ ಎಲ್ಲಾ ಪೋಲಿಸ್ ಠಾಣೆಗಳಿಗೆ ಈ ಕುರಿತು ಮಾಹಿತಿ ನೀಡಿದ್ದು ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರ ಸಹಕಾರದಿಂದ ಉಡುಪಿಯಿಂದ ಧಾರವಾಡಕ್ಕೆ ಪ್ರಯಾಣಿಸಲು ಟಿಕೇಟ್ ಬುಕ್ ಮಾಡಿದ್ದ ಮೂವರು ಮಹಿಳೆಯರನ್ನು ಇಂದು ಬೆಳಿಗ್ಗೆ ಬಂಧಿಸಿದ್ದಾರೆ.
ಕೇವಲ 12 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂದಿಸಿದ ಪೋಲಿಸರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬಂಧಿತರಿಂದ ರುಪಾಯಿ 32,400 ರುಪಾಯಿ ನಗದು, 2 ಮೊಬೈಲ್, 2 ಎಟಿಎಂ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.