ತಿರುವನಂತಪುರಂ:ನಾನು ಈಗಾಗಲೇ ನನ್ನ ದಾರಿಯಲ್ಲಿದ್ದೇನೆ, ನಮ್ಮ ಮಕ್ಕಳನ್ನು ನೋಡಿಕೊಳ್ಳಿ .. ಇದು ಮಾರಣಾಂತಿಕ ನಿಫಾ ವೈರಸ್ ಗೆ ತುತ್ತಾಗಿ , ತಾನಿನ್ನು ಸಾವಿನ ದವಡೆಯಿಂದ ಪಾರಾಗುವುದು ಸಾಧ್ಯವಿಲ್ಲ ಎಂದು ಮನಗಂಡ ನರ್ಸ್ ಲಿನಿ ಕೊನೆ ಕ್ಷಣದಲ್ಲೂ ಪತಿ ಹಾಗೂ ಪುಟ್ಟ ಮಕ್ಕಳ ಮುಖವನ್ನೂ ನೋಡಲು ಸಾಧ್ಯವಿಲ್ಲ ಎಂಬ ನೋವಿನಲ್ಲಿ ಕೊನೆಯುಸಿರೆಳೆಯುವ ಮೊದಲು ಬರೆದ ಪತ್ರ.
ದೇವರನಾಡು ಕೇರಳವನ್ನು ಬೆಚ್ಚಿ ಬೀಳಿಸುವಂತೆ, ಮಾಡಿರುವ ನಿಫಾ ವೈರಸ್ ಗೆ ತುತ್ತಾಗಿದ್ದವರಿಗೆ ಚಿಕಿತ್ಸೆ ನೀಡುತ್ತಾ ಕೊನೆಗೆ ತಾನೇ ಬಲಿಯಾದ ನರ್ಸ್ ಲಿನಿಗೆ ಸಾವಿನ ಭಯಕ್ಕಿಂತಲೂ ಕೊನೆಯ ಬಾರಿಗೆ ತನ್ನ ಕುಟುಂಬವನ್ನು ನೋಡಲಾಗಲಿಲ್ಲವಲ್ಲ ಎನ್ನುವ ವೇದನೆ ಕಾಡಿತ್ತು. " ಸಾಜಿ ಚೇಟಾ .. ನಾನು ಈಗಾಗಲೇ ನನ್ನ ದಾರಿಯಲ್ಲಿದ್ದೇನೆ. ನಿಮ್ಮನ್ನ ನೋಡಲು ನನಗೆ ಸಾಧ್ಯವಾಗಬಹುದೆಂದು ನನಗೆ ಅನ್ನಿಸುತ್ತಿಲ್ಲ ಕ್ಷಮಿಸಿ. ನಮ್ಮ ಮಕ್ಕಳನ್ನು ನೋಡಿಕೊಳ್ಳಿ ..ಮಕ್ಕಳನ್ನು ಗಲ್ಪ್ ಗೆ ಕರೆದುಕೊಂಡು ಹೋಗಿ..ತಂದೆಯನ್ನು ಒಬ್ಬಂಟಿಯಾಗಿರದಂತೆ ನೋಡಿಕೊಳ್ಳಿ..ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಎಂದು ಪುಟ್ಟ ಪತ್ರ ಬರೆದಿದ್ದಾರೆ.
31 ವರ್ಷದ ಲಿನಿ ಅವರು 7 ಹಾಗೂ 2 ವರ್ಷದ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಸೋಕಿನಿಂದ ಮೃತ ಪಟ್ಟ ಲಿನಿ ಅವರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೆ, ಕೊನೆಯ ಬಾರಿಗೆ ನೋಡಲು ಸಹ ಯಾರಿಗೂ ಅವಕಾಶ ನೀಡದೇ ಆಸ್ಪತ್ರೆಯ ಆಡಳಿತ ಮಂಡಳಿ ವಿದ್ಯುತ್ ಶವಾಗಾರದಲ್ಲಿ ಅವರ ಅಂತ್ಯಕ್ರಿಯೆಯನ್ನು ನಡೆಸಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಲಿನಿ ಅವರ ನಿಸ್ವಾರ್ಥ ಸೇವೆಯನ್ನು ಕೇರಳ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ. ನಿಫಾ ವೈರಸ್ ವಿರುದ್ದದ ಹೋರಾಟದಲ್ಲಿ ನರ್ಸ್ ಲಿನಿ ಕೊನೆಯುಸಿರೆಳೆದಿದ್ದಾರೆ ರೋಗಿಯನ್ನು ಕಾಪಾಡುತ್ತಲೇ ಅವರು ಕೊನೆಯುಸಿರೆಳೆದಳು.ಆಕೆ ಹುತಾತ್ಮಳಲ್ಲದಿದ್ದರೆ ಮತ್ತಿನ್ಯಾರು ಎಂದು ವೈದ್ಯರೊಬ್ಬರು ನೋವಿನಿಂದಲೇ ಟ್ವೀಟ್ ಮಾಡಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಲಿನಿ ಅವರ ನಿಸ್ವಾರ್ಥ ಸೇವೆಯನ್ನು ಕೇರಳ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ.