ಪುಷ್ಪರಾಜ್
ಮಂಗಳೂರು, ಅ. 22 (DaijiworldNews/MB) : ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಮತ್ತು ಆತ್ಮನಿರ್ಭರ್ ಭಾರತ್ ಪ್ರೇರಣೆಯಿಂದ ಹಾಗೂ ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಮಡಕೆ ಗೊಬ್ಬರ ನಿರ್ವಹಣೆಯೊಂದಿಗೆ ಮನಪಾ ಸದಸ್ಯ ಕಿರಣ್ ಕೊಡಿಕಲ್ ಸಮಾಜಕ್ಕೆ ಮಾದರಿಯಾಗಿದ್ದಾರೆ.





ಬಂಗ್ರಕೂಳೂರು ವಾರ್ಡಿನ ಮನಪಾ ಸದಸ್ಯರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಕೋಡಿಕಲ್ರವರು ನಮ್ಮ ದೇಶ, ನಮ್ಮ ರಾಜ್ಯ ಹಾಗೂ ನಮ್ಮ ಊರು ಸ್ವಚ್ಛವಾಗಿರಬೇಕೆನ್ನುವ ದೃಷ್ಟಿಯಲ್ಲಿ ಮನೆಯಲ್ಲಿ ಮಡಕೆ ಗೊಬ್ಬರ ನಿರ್ವಹಣೆ ಎಂಬ ನೂತನವಾದ ಕಸ ನಿರ್ವಹಣೆ ಮಾಡುವುದ ಮೂಲಕ ನಗರವನ್ನು ಒಣ ತ್ಯಾಜ್ಯ ಮತ್ತು ಆರ್ದ್ರ ತ್ಯಾಜ್ಯ ಬೇರ್ಪಡಿಸುವ ಮುಖಾಂತರ ಮಂಗಳೂರು ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡುವ ಸಾರ್ವಜನಿಕ ಹಿತದೃಷ್ಟಿಯಿಂದ ಮಡಕೆ ಗೊಬ್ಬರ ನಿರ್ವಹಣೆ ಕಾರ್ಯಕ್ಕೆ ಉತ್ತೇಜನ ನೀಡಿದ್ಡಾರೆ.
ದಾಯ್ಜಿವಲ್ದ್ ವಾಹಿನಿಯಲ್ಲಿ ಮಾತನಾಡಿದ ಇವರು "ರಾಮಕೃಷ್ಣ ಮಿಷನ್ ಇದನ್ನೂ ಚಾಲನೆ ನೀಡಿ ಮನೆ ಮನೆಗಳಿಗೆ ತಲುಪಿಸುವ ಪ್ರಯತ್ನ ನಡೆಸುತ್ತಿದ್ಡಾರೆ, ಸ್ವತಃ ನಾನೆ ನನ್ನ ಮನೆಯಲ್ಲಿ ಮಾಡಿ ವೀಡಿಯೋ ಮಾಡಿ ಫೇಸ್ಬುಕ್ ಖಾತೆಯಲ್ಲಿ ಹಾಕಿದ್ದೆ. ಇದನ್ನು ನೋಡಿದ ಜನರಿಂದ ತಮಗೂ ಬೇಕೆನ್ನುವ ಬೇಡಿಕೆ ಬಂತು. ಇದರಿಂದ ತಾನೇ ಮಡಕೆಯನ್ನು ಸಂಗ್ರಹಿಸಿ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೇನೆ. ನನ್ನ ವಾರ್ಡಿನ ಜನರಿಗೆ ಉಪಯೋಗವಾಗುತ್ತಿದೆ. ರಾಮಕೃಷ್ಣ ಮಿಷನ್ ಬೆಂಬಲ ನೀಡುತ್ತಿದ್ದಾರೆ. ಮಡಕೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ಸಲಹೆ ನೀಡುತ್ತಿದ್ದಾರೆ. ಇದರಿಂದ ನಗರದಲ್ಲಿ ವೆಟ್ ತ್ಯಾಜ್ಯ ಆಗುವುದನ್ನು ಕಡಿಮೆಗೊಳಿಸಬಹುದು ಎನ್ನುವ ಉದ್ದೇಶ ನನ್ನದು. ಈ ರೀತಿಯಾಗಿ ಕಸ ವಿಲೇವಾರಿ ಮಾಡಿದಲ್ಲಿ ನಮ್ಮ ಪರಿಸರ, ನಮ್ಮ ಬಂಗ್ರಕೂಳೂರು, ನಮ್ಮ ಮಂಗಳೂರು ಸ್ವಚ್ಛವಾಗಿ ಕಾಣುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.
ಜನರು ತಮ್ಮ ತಮ್ಮ ಮನೆಯ ಕಸ ವಿಲೇವಾರಿಯನ್ನು ಇದೇ ಮಾದರಿಯಲ್ಲಿ ಮಾಡುವ ನಿಟ್ಟಿನಲ್ಲಿ ಜನರಿಗೆ ಸುಲಭವಾಗಿ ದೊರಕುವ ದೃಷ್ಟಿಯಿಂದ ತನ್ನ ಮನೆಯಲ್ಲೇ ಮಡಕೆ ತಂದು ಆತ್ಮ ನಿರ್ಭರ ಭಾರತದ ಯೋಜನೆಯನ್ನು ಸಹಕಾರ ಗೊಳಿಸುವ ಪ್ರಯತ್ನವನ್ನು ಮಾಡುತಿದ್ದಾರೆ. ಈ ರೀತಿ ಮಾಡುವುದರಿಂದ ವೆಟ್ ತ್ಯಾಜ್ಯ ಭಾರಿ ಪ್ರಮಣದಲ್ಲಿ ಕಡಿಮೆಗೊಳಿಸಬಹುದು ಹಾಗೂ ಪರಿಸರ ಮಾಲಿನ್ಯವಾಗುವುದನ್ನು ತಡೆಗಟ್ಟ ಬಹುದು ಎಂದು ತಿಳಿಸಿದರು.