ಮಂಗಳೂರು, ಅ 22 (DaijiworldNews/SM): ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ಕುಮಾರ್ ಕಟೀಲು ಅವರು ಪಿಟೀಲು ಊದುವುದನ್ನು ಮೊದಲು ನಿಲ್ಲಿಸಲಿ ಎಂದು ಯುವ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರು ಲೇವಡಿ ಮಾಡಿದ್ದಾರೆ.

ಅವರು ಅಕ್ಟೋಬರ್ 22ರಂದು ಮೂಲ್ಕಿ ಬಳಿಯ ಹಳೆಯಂಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹುಲಿಯಾ ಕಾಡಿಗೆ, ಬಂಡೆ ಛಿದ್ರ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಳಿನ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ವ್ಯರ್ಥ ಪ್ರಚಾರ ನಡೆಸುತ್ತಿದ್ದಾರೆ. ಅವರಿಗೆ ಯಾವುದೇ ಬೆಂಬಲವೇ ಇಲ್ಲವಾಗಿದೆ. ಅವರನ್ನು ಕೂಡಲೆ ರಸ್ತೆ ದಾರಿ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಕಳುಹಿಸಿರಿ ರಾಷ್ಟ್ರೀಯ ಹೆದ್ದಾರಿ 75ರ ಅವ್ಯವಸ್ಥೆ ಮೊದಲು ಸರಿಪಡಿಸಲಿ ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾದರೂ ಅವರ ಮಾತನ್ನು ಬೆಂಗಳೂರಿನಲ್ಲಿ ಯಾರೂ ಸಹ ಕೇಳುವ ಪರಿಸ್ಥಿಯಲ್ಲಿಲ್ಲ. ಅವರು ಮೊದಲು ಆತ್ಮ ವಿಮಶ್ರೆ ಮಾಡಿಕೊಳ್ಳಲು ಮಂಗಳೂರಿನಲ್ಲಿ ಅಭಿವೃದ್ಧಿಯನ್ನು ಮೊದಲು ಮಾಡಿರಿ ನಂತರ ರಾಜ್ಯದ ಬಗ್ಗೆ ಚಿಂತನೆ ನಡೆಸಿರಿ ಎಂದು ಪ್ರತಿಕ್ರಿಯಿಸಿದರು.