ಕಾಸರಗೋಡು, ಅ. 23 (DaijiworldNews/MB) : ರಾಷ್ಟೀಯ ಹೆದ್ದಾರಿಯ ಅಭಿವೃದ್ಧಿಯಿಂದ ಜಿಲ್ಲೆಯಲ್ಲಿ 8,400 ಮರಗಳು ಕೊಡಲಿಯೇಟಿಗೆ ಬಲಿಯಾಗಲಿವೆ.



ತಲಪಾಡಿಯಿಂದ ಕಾಲಿಕಡವು ತನಕದ ರಾಷ್ಟ್ರೀಯ ಹೆದ್ದಾರಿ ಯ 96 ಕಿ. ಮೀ ವರೆಗೆ ಇಕ್ಕೆಲಗಳಲ್ಲಿರುವ ಮರಗಳನ್ನು ಕಡಿಯಬೇಕಿದೆ. ಕಡಿಯಬೇಕಾದ ಮರಗಳ ಬಗ್ಗೆ ಸಾಮಾಜಿಕ ಅರಣ್ಯೀಕರಣ ಇಲಾಖೆ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ವರದಿ ಸಲ್ಲಿಸಿದೆ. ಈ ಮರಗಳಿಗೆ ಬೆಲೆ ನಿಗಧಿಗೊಳಿಸಿ ಏಲಂ ನಡೆಸುವ ಪ್ರಕ್ರಿಯೆಗೆ ಮುಂದಾಗಿದೆ.
ಕಡಿಯುವ ಮರಗಳಿಗೆ ಸುಮಾರು ಎರಡು ಕೋಟಿ ರೂ. ಗಳಷ್ಟು ಬೆಲೆ ಅಂದಾಜಿಸಲಾಗಿದೆ. ಕಡಿಯುವ ಮರಗಳ ಬದಲಿಗೆ ಇದರ ಹತ್ತು ಪಟ್ಟು ಮರಗಳನ್ನು ಬೆಳೆಸುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿಯಿಂದ ನಡೆಯಲಿರುವ ಈ ಅಭಿವೃದ್ಧಿ ಕಾಮಗಾರಿಗೆ ಶೀಘ್ರ ಚಾಲನೆ ಲಭಿಸಲಿದ್ದು, ಈಗಾಗಲೇ ಶಿಲಾನ್ಯಾಸ ನೆರವೇರಿಸಲಾಗಿದೆ.