ಉಡುಪಿ, ಅ. 23 (DaijiworldNews/HR): ಜಿಲ್ಲಾ ಆಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.

ಉಡುಪಿ ಜಿಲ್ಲೆಯಾಗಿ 23 ವರ್ಷಗಳು ಕಳೆದಿದ್ದು, ಉಡುಪಿ ಜನತೆಯ ಬಹು ಬೇಡಿಕೆಯ ಈ ಯೋಜನೆಗೆ ಅನುಮೋದನೆ ನೀಡಿರುವುದು ಐತಿಹಾಸಿಕ ನಿರ್ಣಯವಾಗಿದೆ.
ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಹಲವಾರು ಚಿಕಿತ್ಸೆ ಸೇವೆ ಲಭ್ಯವಿದ್ದು ಜಿಲ್ಲಾಸ್ಪತ್ರೆ ಪೂರ್ಣ ರೀತಿಯಲ್ಲಿ ಕೆಲಸ ಮಾಡಲು ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಭರ್ತಿಯಾಗಬೇಕಿದೆ.
ತಜ್ಞ ವೈದ್ಯರ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ 4, ಶಸ್ತ್ರ ಚಿಕಿತ್ಸಕರು 2, ಅರಿವಳಿಕೆ ತಜ್ಞ, ಎಲುಬು ಕೀಲು ತಜ್ಞ, ಚರ್ಮ ರೋಗ, ಇಎನ್ಟಿ, ಮಾನಸಿಕ ರೋಗ.
ತಜ್ಞ ರೇಡಿಯಾಲಜಿಸ್ಟ್ತ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ 6, ಶುಕ್ರೂಷಕಿಯರು 25, ಕಿರಿಯ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆ ಸೇರಿದಂತೆ ಒಟ್ಟು 90 ಮಂದಿಯ ನೇಮಕವಾಗಬೇಕಿದೆ.
ಒಟ್ಟು 88 ಗ್ರೂಪ್ ಬಿ, ಸಿ, ಡಿ, 35 ಗ್ರೂಪ್ ಎ ಸಿಬ್ಬಂದಿಗಳ ಅಗತ್ಯವಿದೆ.
ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿಸುವಂತೆ ಒತ್ತಾಯಿಸಿ ಹಲವಾರು ಸಂಘಟನೆಗಳು ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಕೂಡ ಮಾಡಿದ್ದರು.
ರೂ. 115 ಕೋಟಿ ವೆಚ್ಚದಲ್ಲಿ ಕಟ್ಟಡ ಮತ್ತು 250 ಬೆಡ್ ಆಸ್ಪತ್ರೆಗೆ ಬೇಕಾದಷ್ಟು ಸಿಬ್ಬಂದಿ, ಪೀಠೋಪಕರಣಗಳು ಸೇರಿದಂತಹ ಈ ಬೃಹತ್ ಯೋಜನೆಗೆ ಅನುಮೋದನೆ ಸಿಕ್ಕಿದೆ .
ಆದಷ್ಟು ಶೀಘ್ರವಾಗಿ ಈ ಯೋಜನೆ ಕಾರ್ಯಗತಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಮಾಧ್ಯಮದವರಿಗೆ ತಿಳಿಸಿದ್ದಾರೆ.