ಬಂಟ್ವಾಳ, ಅ. 23 (DaijiworldNews/SM): ಕರಾವಳಿಯಲ್ಲಿ ಮತ್ತೆ ತಲ್ವಾರ್ ಸದ್ದು ಮಾಡಿದೆ. ಸುರೇಂದ್ರ ಬಂಟ್ವಾಳ ಕೊಲೆ ನಡೆದು ಎರಡು ದಿನಗಳೊಳಗೆ ಕರಾವಳಿಯಲ್ಲಿ ಮತ್ತೊಂದು ಕೊಲೆ ನಡೆದಿದೆ.

ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ತಲ್ವಾರ್ ದಾಳಿ ನಡೆದು ರೌಡಿಶೀಟರ್ ಫಾರೂಕ್ ಯಾನೆ ಚೆನ್ನೆ ಫಾರೂಕ್ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಆತನ ಸ್ನೇಹಿತರೇ ಸೇರಿಕೊಂಡು ಹತ್ಯೆ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮೆಲ್ಕಾರ್ ನ ಗುಡ್ಡೆಯಂಗಡಿ ಎಂಬಲ್ಲಿ ಹತ್ಯೆ ನಡೆದಿದ್ದು, ವೈಯುಕ್ತಿಕ ಕಾರಣದಿಂದ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.ಇನ್ನು ದಿನಗಳ ಹಿಂದೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಟ ಹಾಗೂ ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಅವರ ಬರ್ಬರ್ ಹತ್ಯೆ ನಡೆದಿತ್ತು. ಅದರ ಬೆನ್ನಲ್ಲೇ ಮತ್ತೊಂದು ಕೊಲೆ ನಡೆದಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ.