ಕಾಸರಗೋಡು, ಅ.23 (DaijiworldNews/PY): ಜಿಲ್ಲೆಯಲ್ಲಿ ಶುಕ್ರವಾರ 189 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

180 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದ್ದು, 7 ಮಂದಿ ವಿದೇಶ ಹಾಗೂ ಇಬ್ಬರು ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. ಈ ಪೈಕಿ ಐವರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ.
ಈ ನಡುವೆ 327 ಮಂದಿ ಗುಣಮುಖರಾಗಿದ್ದು, 2606 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ.
ಈವರೆಗೆ 17,495 ಮಂದಿಗೆ ಸೋಂಕು ತಗುಲಿದ್ದು, 14,719 ಮಂದಿ ಗುಣಮುಖರಾಗಿದ್ದಾರೆ. 4,856 ಮಂದಿ ನಿಗಾದಲ್ಲಿದ್ದಾರೆ.