ಕಾಸರಗೋಡು, ಅ. 23 (DaijiworldNews/SM): ನೂತನವಾಗಿ ನಿರ್ಮಿಸಲಾಗಿದ್ದ ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ ಶೀಘ್ರವೇ ಸೇವೆ ಆರಂಭಿಸಬೇಕು. ಉದ್ಘಾಟನೆ ಕಳೆದು ಒಂದು ತಿಂಗಳು ಕಳೆದರೂ ಇನ್ನೂ ಕಾರ್ಯಾರಂಭಗೊಳಿಸಿಲ್ಲ. ಇದರಿಂದ ಕೂಡಲೇ ಆಸ್ಪತ್ರೆ ಕಾರ್ಯಾರಂಭಗೊಳಿಸುವಂತೆ ಒತ್ತಾಯಿಸಿ ಅಮರಣಾಂತ ನಿರಾಹಾರ ಸತ್ಯಾಗ್ರಹ ನಡೆಸುವುದಾಗಿ ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ ಎಚ್ಚರಿಕೆ ನೀಡಿದ್ದಾರೆ.

ಕೇರಳ ರಾಜ್ಯೋತ್ಸವ ದಿನವಾದ ನವಂಬರ್ ಒಂದರಂದು ಕಾಞಂಗಾಡ್ ನ ಮೈದಂಪ ಮೈದಾನದಲ್ಲಿ ಸತ್ಯಾಗ್ರಹ ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ. ನವಂಬರ್ ಒಂದರಂದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಆನ್ ಲೈನ್ ಮೂಲಕ ಸತ್ಯಾಗ್ರಹ ಉದ್ಘಾಟಿಸುವರು ಎಂದು ಅವರು ತಿಳಿಸಿದ್ದಾರೆ.
ಸುಮಾರು 541 ಹಾಸಿಗೆಗಳುಲ್ಲ ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿಗಳನ್ನು ನೇಮಿಸಿಲ್ಲ. ಮೂಲಭೂತ ಸೌಲಭ್ಯಗಳ ಕೊರತೆ ಇದ್ದು, ಒಂದು ಕಡೆ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರೂ ಆಸ್ಪತ್ರೆ ಪುನರಾರಂಭಗೊಳಿಸದಿರುವುದು ಪ್ರತಿಭಟನೆಗೆ ಕಾರಣವಾಗುತ್ತಿದೆ.