ಮಂಗಳೂರು, ಮೇ 24 : ನಿಫಾ ವೈರಸ್ ನ ಎಫೆಕ್ಟ್ , ಕರಾವಳಿಯ ಹಣ್ಣಿನ ಮಾರುಕಟ್ಟೆಗೂ ತಟ್ಟಿದೆ. ರಂಜಾನ್ ತಿಂಗಳಾದ್ದರಿಂದ ಕಳೆದ ವಾರದಿಂದ ಹಣ್ಣುಹಂಪಲುಗಳಿಗೆ ಭಾರೀ ಬೇಡಿಕೆ ಬಂದಿತ್ತು. ಮುಸ್ಲಿಮರು ದಿನದ ಉಪವಾಸವನ್ನು ಕೊನೆಗೊಳಿಸುವ ಸಂದರ್ಭದಲ್ಲಿ ಇಫ್ತಾರ್ ಕೂಟಕ್ಕಾಗಿ ಹೆಚ್ಚಿನ ಪ್ರಮಾನದಲ್ಲಿ ಹಣ್ಣು ಬಳಸುವುದರಿಂದ ಮಾರಾಟದ ಗತಿಯೊಂದಿಗೆ ಬೆಲೆಯೂ ಏರಿಕೆ ಕಂಡಿತ್ತು.
ನಿಫಾ ವೈರಸ್ ಕುರಿತಂತೆ, ಬಾವಲಿಗಳು ಹಕ್ಕಿಗಳು ಕಚ್ಚಿದ ಹಣ್ಣನ್ನು ಸೇವಿಸಿಬೇಡಿ ಎಂದು ವೈದ್ಯರು ನೀಡಿದ ಮುನ್ನೆಚ್ಚರಿಕೆ ಸುದ್ದಿ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆಯೇ ಜನರು ಹಣ್ಣಿನ ಖರೀದಿಯ ಗೋಜಿಗೆ ಹೋಗಲಿಲ್ಲ.
ಹೀಗಾಗಿ ಮಾರುಕಟ್ಟೆ ಹನ್ಣು ಹಂಪಲು ದರದಲ್ಲೂ ಏರಿಳಿತ ಖಂಡಿದೆ. ಮಾರುಕಟ್ಟೆಗೆ ಬಂದು ಹಣ್ಣು ಹಂಪಲು ಖರೀದಿಸಲು ಗ್ರಾಹಕರು ಕೂಡಾ ಹಿಂದೇಟು ಹಾಕುತ್ತಿದ್ದಾರೆ. ದಿನಂಪ್ರತಿ ಲಕ್ಷಗಟ್ಟಲೆ ವಹಿವಾಟು ನಡೆಯುವ ವ್ಯಾಪಾರ ಕಳೆದೆರಡು ದಿನಗಳಿಂದ ಭಾರೀ ಇಳಿಕೆ ಖಂಡಿದೆ.
ಕೇರಳದಿಂದ ಹಣ್ಣಿನ ವ್ಯಾಪಾರಿಗಳು ಬಂದು ಇಲ್ಲಿಂದ ಹಣ್ಣುಗಳನ್ನು ರಖಂನಲ್ಲಿ ಪ್ರತಿದಿನ ಖರೀದಿಸಿ ಕೊಂಡೊಯ್ಯುತ್ತಿದ್ದರು. ಆದರೆ ಕಳೆದೆರಡು ದಿನಗಳಿಂದ ಕೇರಳದ ವ್ಯಾಪಾರಿಗಳ ಸುಳಿವಿಲ್ಲದೆ ವ್ಯಾಪಾರ ಸಂಪೂರ್ಣ ಕುಸಿದಿದೆ.