ಉಡುಪಿ, ಅ. 24 (DaijiworldNews/HR): ಜಿಲ್ಲೆಯ ಕೊರೊನಾ ಪ್ರಕರಣಗಳು ಕೆಳಗಿಳಿಯುವ ಲಕ್ಷಣಗಳನ್ನು ಕಂಡುಬರುತ್ತಿದೆ. ಜಿಲ್ಲಾಡಳಿತ, ಅಧಿಕಾರಿಗಳು ಮತ್ತು ಎಲ್ಲಾ ಇಲಾಖೆಗಳ ಸಿಬ್ಬಂದಿ ಮಾಡಿದ ಪ್ರಯತ್ನದ ಫಲ ಇದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಹೇಳಿದ್ದಾರೆ.

ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಕಡೆಗಣಿಸಿ, ಕೊರೊನಾ ನಿಯಂತ್ರಿಸಲು ಯಾವುದೇ ರಜೆ ಪಡೆಯದೆ ಶ್ರಮಿಸಿದ ಪರಿಣಾಮವಾಗಿ ಕಳೆದ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ ಎಂದರು.
ನಮ್ಮ ಜಿಲ್ಲೆಯು ಕೊರೊನಾ ಪರೀಕ್ಷೆಗಳನ್ನು ನಡೆಸುವುದು, ಸೋಂಕಿತರನ್ನು ಗುರುತಿಸುವುದು, ಅವರಿಗೆ ಚಿಕಿತ್ಸೆ ನೀಡುವುದು ಮತ್ತು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಇತರ ಕಾರ್ಯವಿಧಾನಗಳನ್ನು ಕಾರ್ಯಗತಗೊಳಿಸುವಲ್ಲಿ ಇತರ ಜಿಲ್ಲೆಗಳಿಗೆ ಮಾದರಿಯಾಗಿ ಹೊರಹೊಮ್ಮಿತು. ನಾವು ಯಶಸ್ಸಿನ ಹಂತವನ್ನು ಸಮೀಪಿಸುತ್ತಿರುವ ಸಮಯದಲ್ಲಿ, ನಮಗೆ ಸಂಪೂರ್ಣ ಸಹಕಾರ ಬೇಕು ಜನರ ಎಂದು ಜನರಲಿ ಮನವಿ ಮಾಡಿಕೊಂಡಿದ್ದಾರೆ.
ಸೋಂಕಿನ ಸರಪಳಿಯನ್ನು ಮುರಿಯಲು ಕೊರೊನಾ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಿದ ಗುರಿಗಳನ್ನು ತಲುಪಬೇಕಾಗಿದೆ. ಪ್ರತಿದಿನ ಕನಿಷ್ಠ 2,300 ಶಂಕಿತರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿದೆ. ಕೊರೊನಾ ಸೋಂಕಿನಿಂದ ಮುಕ್ತವಾದ ಜಿಲ್ಲೆಯನ್ನು ಪರಿವರ್ತಿಸಲು ಎಲ್ಲರಿಗೂ ಸಹಾಯ ಮಾಡಬೇಕೆಂದು ವಿನಂತಿಸುತ್ತಿದೇನೆ ಎಂದು ಹೇಳಿ, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.