ಕಾಸರಗೋಡು, ಅ.24 (DaijiworldNews/PY): ಕೆಲ ದಿನಗಳ ಹಿಂದೆ ಉಪ್ಪಳ ಕೈಕಂಬದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಉಪ್ಪಳ ಫಿರ್ದೋಜ್ ನಗರದ ಆಸಿಫ್ (26) ಎಂದು ಗುರುತಿಸಲಾಗಿದೆ.
ಎರಡು ವಾರಗಳ ಹಿಂದೆ ಎರಡು ಕಾರುಗಳಲ್ಲಿ ಬಂದ ತಂಡಗಳ ನಡುವೆ ಗುಂಡಿನ ದಾಳಿ ಹಾಗೂ ತಲವಾರು ಕಾಳಗ ನಡೆದಿತ್ತು. ಪ್ರಕರಣದಲ್ಲಿ ಆಸಿಫ್ ಸೇರಿದಂತೆ ನಾಲ್ವರ ವಿರುದ್ದ ಕೊಲೆ ಯತ್ನ ಮೊಕದ್ದಮೆ ದಾಖಲಿಸಲಾಗಿತ್ತು.