ಕಾಸರಗೋಡು, ಅ.24 (DaijiworldNews/PY): ಜಿಲ್ಲೆಯಲ್ಲಿ ಇಂದು 410 ಮಂದಿ ಕೊರೊನಾ ಮುಕ್ತರಾಗಿದ್ದು, ಅತೀ ಹೆಚ್ಚು ಮಂದಿ ಗುಣಮುಖರಾಗಿದ್ದು, ಈ ನಡುವೆ 200 ಮಂದಿಗೆ ಇಂದು ಸೋಂಕು ದೃಢಪಟ್ಟಿದೆ.

192 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದ್ದು, ಮೂವರು ವಿದೇಶ ಹಾಗೂ ಐವರು ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. ಆರು ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಪತ್ತೆಯಾಗಿದೆ. ಏತನ್ಮಧ್ಯೆ ಸೋಂಕಿಗೆ 171 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2,395 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 17,695 ಮಂದಿಗೆ ಸೋಂಕು ದೃಢಪಟ್ಟಿದೆ. 15,129 ಮಂದಿ ಗುಣಮುಖರಾಗಿದ್ದಾರೆ. 4936 ಮಂದಿ ನಿಗಾದಲ್ಲಿದ್ದಾರೆ.