ಉಡುಪಿ, ಅ.24 (DaijiworldNews/PY): ದಲಿತ ಮಹಿಳೆ ಸುಂದರಿ ಪುತ್ತೂರು ಕಳೆದ 20 ವರ್ಷಗಳಿಂದ ಹಲವಾರು ಸ್ವ ಸಹಾಯ ಗುಂಪಿನ ಸದಸ್ಯರಿಂದ ಸ್ವಂತ ವಾಹನ ಖರೀದಿಸಿ ತಾನೆ ವಾಹನ ಚಲಾಯಿಸಿ ಕಸವಿಲೇವಾರಿ ಮಾಡುತ್ತಿದ್ದರೂ ಈ ಬಾರಿ ವಾರ್ಡ್ ಹಂಚಿಕೆ ಮಾಡುವಾಗ ಅವರ ಮೇಲೆ ಸಾಕಷ್ಟು ದೂರುಗಳಿವೆ ಎಂದು ಹೇಳಿ ನಗರಸಭೆ ತನಗೆ ಅನ್ಯಾಯ ಮಾಡಿದ್ದಾರೆ.



ಇತ್ತೀಚಿನ ದಿನಗಳಲ್ಲಿ ನಗರಸಭೆಯ ಅಧಿಕಾರಿ ವರ್ಗದವರು, ಶಾಸಕರು ಮತ್ತು ಕೆಲವು ವಾರ್ಡ್ ನ ಕೌನ್ಸಿಲರ್ಸ್ ಗಳು ಸೇರಿ ಸಭೆ ನಡೆಸಿ ನಮ್ಮ ಗುಂಪುಗಳ ಅಭಿಪ್ರಾಯಗಳಿಗೆ ಬೆಲೆ ನೀಡದೆ ತಮ್ಮಿಷ್ಟದಂತೆ ವಾರ್ಡ್ ಹಂಚಿಕೆ ಮಾಡೊರುತ್ತಾರೆ ಎಂದು ಸುಂದರಿ ಅವರು ದೂರಿದ್ದಾರೆ.
ದೂರುಗಳ ಪ್ರತಿ ನಗರಸಭೆ ಕೈಗೊಂಡ ಕ್ರಮದ ನೋಟೀಸಿನ ಪ್ರತಿ ಕೇಳಿದಾಗ ಮಾಹಿತಿ ಹಕ್ಕಿನಲ್ಲಿ ದೂರುಗಳೇ ಇಲ್ಲ ಎಂದು ಎಂದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದಾಗ ಜಿಲ್ಲಾಧಿಕಾರಿಯವರು ಪೌರಾಯುಕ್ತರಿಗೆ ಹೇಳುತ್ತೇನೆ, ಪೌರಾಯುಕ್ತರಲ್ಲಿ ಕೇಳಿದಾಗ ಶಾಸಕರಲ್ಲಿ ಕೇಳಿದಾಗ ನನ್ನ ಪಕ್ಷದ ನಗರಸಭಾ ಸದಸ್ಯರು ಹೇಳಿದವರಿಗೆ ನೀಡುತ್ತೇವೆ. ಎಂದು ಜಾರಿ ಕೊಳ್ಳುತ್ತಿದ್ದಾರೆ.
ಈ ಮೊದಲು ಕೆಲಸ ಮಾಡುತ್ತಿದ್ದ ವಾರ್ಡ್ಗಳನ್ನು ಹಿಂಪಡೆದು ಆದಾಯವಿಲ್ಲದ ವಾರ್ಡ್ ಅನ್ನು ನೀಡಿದ್ದಾರೆ. ಇದರಿಂದ ಬರುವ ಆದಾಯದಲ್ಲಿ ನಗರಸಭೆಯ ವಾಹನಕ್ಕೆ ಕಟ್ಟಬೇಕಾದ ಡೆಪಾಸಿಟ್, ಡೀಸೆಲ್ ವೆಚ್ಚ, ನಾಲ್ಕು ಕಾರ್ಮಿಕರ ವೇತನ, ಪಿ ಎಫ್, ಇಎಸ್ಐ ಇತರೆ ಖರ್ಚುಗಳು ಭರಿಸಲು ಅಸಾಧ್ಯವಾಗುತ್ತದೆ. ಹೆಚ್ಚುವರಿ ಹಣವನ್ನು ಇದೀಗ ನಾವೇ ಭರಿಸುವಂತಾಗಿದೆ.
ಸಾರ್ವಜನಿಕರಿಂದ ಯಾವುದೇ ಲಿಖಿತ ದೂರಿಲ್ಲದೆಯು ನಮ್ಮ ಮೇಲೆ ಆರೋಪ ಹೊರಿಸುತ್ತಾರೆ. ನಗರಸಭೆಗೆ ಕರೆಸಿ ತುಚ್ಛವಾಗಿ ನಿಂದಿಸುತ್ತಾರೆ ಎಂದು ಅವರು ದೂರಿದ್ದಾರೆ. ಕಳೆದ 20 ವರ್ಷಗಳಿಂದ ಸ್ವಚ್ಛತೆಗಾಗಿ ದುಡಿದ ತನಗೆ, ನಗರಸಭೆಯು ಹತ್ತಿರದ ವಾರ್ಡನ್ನು ಕೊಟ್ಟು ನ್ಯಾಯ ಕೊಡಬೇಕು ಎಂದು ನಗರಸಭೆಗೆ ಸುಂದರಿ ಒತ್ತಾಯಿಸಿದ್ದಾರೆ.
ಪ್ರಗತಿ ನಗರ ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯಾದ ಇನ್ನೊಂದು ಮಹಿಳಾ ಗುಂಪಿನೊಂದಿಗೆ ಕೆಲಸ ಮಾಡುತ್ತ ಬಂದಿದ್ದಾರೆ. ಆ ವಾಹನದ ಚಾಲಕಿಯೂ ಅವರೇ ನಿರ್ವಹಿಸುತ್ತಿದ್ದರು. ಸ್ವಂತ ಗಾಡಿಯನ್ನು ಖರೀದಿಸಿದ್ದರು. ಕಳೆದ ಎರಡು ತಿಂಗಳಿನಿಂದ ಚಾಲನೆಯನ್ನು ಬಿಟ್ಟು, ನಗರಸಭೆ ಕೊಟ್ಟ ವಾಹನದಲ್ಲಿ ಕಸವಿಲೇವಾರಿ ಮಾತ್ರ ಮಾಡುತ್ತಿದ್ದಾರೆ.
ಅವರ ಈ ಸೇವೆಗೆ ಸಂಘಟನೆಗಳು ಗೌರವಿಸಿ ಸಮ್ಮಾನಿಸಿವೆ. ಈಕೆ ಬಡ ಕುಟುಂಬದಿಂದ ಬೆಳೆದರೂ ಪಿಯುಸಿ ಶಿಕ್ಷಣವನ್ನು ಮುಗಿಸಿದ್ದಾರೆ. 2006ರಲ್ಲಿ ಮಹಿಳೆಯರಲ್ಲಿ ಕಾರು ಮತ್ತು ಚಾಲನೆಗೆ ತರಬೇತಿ ಪಡೆದವರಲ್ಲಿ ಇವರು ಒಬ್ಬರು. ಸ್ವಾವಲಂಬಿ ಜೀವನಕ್ಕೆ ಈ ಕಾರ್ಯವನ್ನು ಆಯ್ಕೆ ಮಾಡಿದ್ದರು.
ನಗರದ ಸ್ವಚ್ಛತೆಯನ್ನು ಮಾಡುವ 53 ವರ್ಷ ಪ್ರಾಯದ ಸುಂದರಿಯವರ ಕುಟುಂಬಕ್ಕೆ ಇವರೇ ಆಧಾರ. ಪತಿ ಅನಾರೋಗ್ಯ ಪೀಡಿತರಾಗಿದ್ದಾರೆ. ಮಗಳು ಶಿಕ್ಸಣ ಪಡೆಯುತ್ತಿದ್ದಾರೆ.