ಸುಳ್ಯ, ಅ. 25 (DaijiworldNews/SM): ಸಂಪಾಜೆ ಪ್ರದೇಶದಲ್ಲಿ ಮತ್ತೆ ಕಾಡಾನೆ ದಾಳಿ ಮುಂದುವರೆದಿದೆ. ಮತ್ತೆ ಆನೆ ದಾಳಿ ನಡೆದಿದ್ದು, ಅಪಾರ ಕೃಷಿ ನಾಶವಾಗಿದೆ.

ದ.ಕ. ಜಿಲ್ಲೆಯ ಗಡಿ ಭಾಗವಾಗಿರುವ ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಸರವು ರತ್ನವೇಣಿ ಭಟ್ ಅವರ ಕೃಷಿ ಜಾಗಕ್ಕೆ ಕಾಡಾನೆ ದಾಳಿ ಮಾಡಿದೆ. ಇದರಿಂದಾಗಿ ಅಪಾರವಾದ ಕೃಷಿ ನಷ್ಟಗೊಂಡಿದೆ.
ಕೃಷಿ ಜಾಗಕ್ಕೆ ದಾಳಿ ನಡೆಸಿದ ಆನೆಗಳು ತೆಂಗು, ಅಡಿಕೆ, ಬಾಳೆ ಕೃಷಿಯನ್ನು ನಾಶಪಡಿಸಿವೆ.