ಬೆಂಗಳೂರು,ಮೇ 25: ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡದೆ ಹೋದರೆ ರಾಜ್ಯಾದ್ಯಂತ ಸೋಮವಾರ (ಮೇ 28) ಬಂದ್ ನಡೆಸಲಾಗುವುದು ಎಂದು ಬಿ.ಎಸ್. ಯಡಿಯೂರಪ್ಪ ಅವರು ಸದನ ಹೇಳಿದಂತೆ, ಇದೀಗ ಬಿಜೆಪಿ ರಾಜ್ಯವ್ಯಾಪಿ ಬಂದ್ಗೆ ಕರೆ ನೀಡಿದೆ. ರಾಜ್ಯದ ಸಹಕಾರ ಸಂಘಗಳು, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರಾಜ್ಯದ ರೈತರು ಮಾಡಿರುವ ಸುಮಾರು 53,000 ಕೋಟಿ ರೂಪಾಯಿಗಳ ಸಾಲವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಸಂಜೆಯೊಳಗೆ ಮನ್ನಾ ಮಾಡಬೇಕು. ಇಲ್ಲವಾದಲ್ಲ್ ಹೋರಾಟ ಹಾದಿ ಹಿಡಿಯುದಾಗಿ ಎಚ್ಚರಿಸಿದರು.
ಅದರಂತೆ ಸದನದ ಹೊರಗೆ ಬಂದ ಯಡಿಯೂರಪ್ಪ, ನಾವು ಅಧಿಕಾರದಲ್ಲಿ ಇರದೇ ಇದ್ದರು ರೈತರಿಗಾಗಿ ಹೋರಾಡಲು ಸದಾ ಸಿದ್ದ ಹೀಗಾಗಿ ರೈತರ ಸಾಲ ಮನ್ನಾ ಮಾಡಿಸೋಣ ಎಂಬ ನಿಲುವು ತಳೆದಿದ್ದಾರೆ
ಬಳಿಅಕ್ ಮೇ. 28 ರ ಬಂದ್ ಯಶಸ್ವಿಗೊಳಿಸುವಂತೆ ಎಲ್ಲ ತಾಲೂಕು, ಹೋಬಳಿ, ಜಿಲ್ಲಾ ಕೇಂದ್ರಗಳಲ್ಲಿ ಬಂದ್ ಆಚರಿಸುವಂತೆ ಶಾಸಕರು ಮತ್ತು ಬಿಜೆಪಿ ನಾಯಕರಿಗೆ ಕರೆನೀಡಿದರು.