ಬಂಟ್ವಾಳ, ಅ. 26 (DaijiworldNews/HR): ತುಳು ನಟ ಮತ್ತು ರೌಡಿ ಶೀಟರ್ ಸುರೇಂದ್ರ ಬಂಟ್ವಾಳ್ ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣವು ಈಗ ಹೊಸ ಆಯಾಮವನ್ನು ಪಡೆದುಕೊಂಡಿದ್ದು, ತನ್ನ ಬಳಿ ಇದ್ದ ಒಂದು ಕೋಟಿ ರೂಪಾಯಿ ಹಣ ದೋಚುವುದಕ್ಕಾಗಿ ಈ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಆರೋಪವನ್ನು ಸುರೇಂದ್ರನ ತಾಯಿ ರಾಧಾ ಮತ್ತು ಮಂಗಳೂರಿನಲ್ಲಿರುವ ಸುರೇಂದ್ರ ಸಹೋದರ ಚಂದ್ರಹಾಸ್ ಮಾಡಿದ್ದಾರೆ. ಭಂಡರಿಬೆಟ್ಟು ಫ್ಲ್ಯಾಟ್ನಲ್ಲಿ ಸುರೇಂದ್ರ ಅವರ ಬಳಿ ಒಂದು ಕೋಟಿ ರೂಪಾಯಿ ನಗದು ಇತ್ತು ಮತ್ತು ಅವರ ದೇಹದ ಮೇಲೆ ಸುಮಾರು ಒಂದು ಕಿಲೋಗ್ರಾಂ ಚಿನ್ನದ ಆಭರಣಗಳಿದ್ದು ಹಾಗಾಗಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಲೆಯ ನಂತರ ಆರೋಪಿಗಳು ನಗದು ಮತ್ತು ಚಿನ್ನದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. "ಈ ವಿಷಯವನ್ನು ನಾವು ಪೊಲೀಸರಿಗೆ ತಿಳಿಸಿದ ನಂತರವೂ ಅವರು ನಮ್ಮ ದೂರನ್ನು ಸ್ವೀಕರಿಸಲು ಸಿದ್ಧರಿಲ್ಲ. ಆದ್ದರಿಂದ ನಾವು ನಗದು ಮತ್ತು ಆಭರಣಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇವೆ ಎಂದರು.
ಇನ್ನು ತಮ್ಮ ಮನೆಯಲ್ಲಿ ಬೆಳೆದ ಸತೀಶ್ ಕುಲಾಲ್ ಇತರರೊಂದಿಗೆ ಸೇರೆ ಈ ಕೊಲೆ ಮಾಡಿದ್ದರೆ. ಇದರ ಹಿಂದೆ ಸತೀಶ್ ಮಾತ್ರವಲ್ಲ, ಕಾಣದ ಹಲವಾರು ಕೈಗಳು ಕೆಲಸ ಮಾಡಿವೆ ಎಂದು ಹೇಳಿದ್ದಾರೆ. ಮೂರು ದಿನಗಳ ಹಿಂದೆಯೇ ತನ್ನ ಮಗ ತನ್ನ ಫ್ಲ್ಯಾಟ್ನಲ್ಲಿದ್ದ ಹಣದ ಬಗ್ಗೆ ಹೇಳಿದ್ದಾಗಿ ರಾಧಾ ಹೇಳಿದ್ದಾರೆ. "ಆದ್ದರಿಂದ, ನಗದು ಮತ್ತು ಆಭರಣಗಳಿಗಾಗಿ ಅವನನ್ನು ಕೊಲೆಮಾಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.