ಕಾಸರಗೋಡು,ಅ. 26 (DaijiworldNews/HR): ಶ್ರೀನಗರದಲ್ಲಿ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಸಿಡಿದು ಆಸ್ಪತ್ರೆಗೆ ದಾಖಲಾಗಿದ್ದ ಸಿಆರ್ಪಿಎಫ್ ಇನ್ಸ್ ಪೆಕ್ಟರ್ ರೋರ್ವರು ಮೃತಪಟ್ಟಿದ್ದಾರೆ.

ಕಾಞ0ಗಾಡ್ ನ ಎಂ.ದಾಮೋದರನ್ ( 54 ) ಮೃತಪಟ್ಟವರು.
ಆಗಸ್ಟ್ 12 ರಂದು ಈ ಘಟನೆ ನಡೆದಿತ್ತು. ಬಂದೂಕಿನಿಂದ ಸಿಡಿದ ಗುಂಡಿನಿಂದಾಗಿ ಗಂಭೀರ ಗಾಯಗೊಂಡಿದ್ದು, ಅವರನ್ನು ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಮೃತದೇಹವನ್ನು ನಾಳೆ ಊರಿಗೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.