ಕಾಸರಗೋಡು, ಅ. 27 (DaijiworldNews/HR) : ಎಡನೀರು ಮಠದ ಉತ್ತರಾಧಿಕಾರಿಯಾಗಿ ಶ್ರೀ ಸಚ್ಚಿದಾನಂದ ಭಾರತಿ ರವರ ಸನ್ಯಾಸ ಧೀಕ್ಷೆ ಸೋಮವಾರ ಕಾಂಚಿ ಕಾಮಕೋಟಿ ಪೀಠದ ಜಗದ್ಗುರುಗಳಿಂದ ನೆರವೇರಿತು.







ಕಂಚಿ ಶ್ರೀಗಳಿಂದ ನೂತನ ಪೀಠಾಧಿಪತಿಗಳಿಗೆ ಶ್ರೀ ಸಚ್ಚಿದಾನಂದ ಭಾರತಿ ಎಂದು ನಾಮಕರಣವಾಗುವುದರೊಂದಿಗೆ ಜಯರಾಮ ಮಂಜತ್ತಾಯರು ತೋಟಕಾಚಾರ್ಯ ಪರಂಪರೆಯ ಎಡನೀಡು ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಇನ್ನು ಇಂದು ಬೆಳಿಗ್ಗೆ 11 ರಿಂದ 12ರ ಮಧ್ಯೆ ಸಚ್ಚಿದಾನಂದ ಶ್ರೀಗಳು ಎಡನೀರು ಪುರಪ್ರವೇಶಗೈಯ್ಯಲಿದ್ದು ಬುಧವಾರ ಎಡನೀರು ಮಠಾಧೀಶರಾಗಿ ಪೀಠಾರೋಹಣಗೈಯ್ಯಲಿರುವರು.