ಕಾಸರಗೋಡು, ಅ. 27 (DaijiworldNews/HR): ಜಿಲ್ಲೆಯಲ್ಲಿ ಹಲವು ದಿನಗಳ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಎರಡಂಕೆಗೆ ಇಳಿಕೆಯಾಗಿದ್ದು, ಸೋಮವಾರ 64 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಸೋಂಕಿತರಲ್ಲಿ 60 ಮಂದಿಗೆ ಸಂಪರ್ಕದಿಂದ ಹಾಗೂ ಮೂವರು ವಿದೇಶ , ಓರ್ವ ಹೊರರಾಜ್ಯಗಳಿಂದ ಬಂದವರು .ಜಿಲ್ಲೆಯಲ್ಲಿ ಈಗ 2019 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪೈಕಿ 1528 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4980 ಮಂದಿ ನಿಗಾದಲ್ಲಿದ್ದಾರೆ. 753 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 17,896 ಮಂದಿಗೆ ಸೋಂಕು ತಗಳಿದ್ದು, 16,219 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದ್ದು,15, 673 ಮಂದಿ ಗುಣಮುಖರಾಗಿದ್ದಾರೆ. 174 ಮಂದಿ ಮೃತಪಟ್ಟಿದ್ದಾರೆ.