ಕಾಸರಗೋಡು, ಅ. 27 (DaijiworldNews/MB) : ಟ್ರಾಲಿ ಬ್ಯಾಗ್ನ ಟಯರ್ನಲ್ಲಿ ಬಚ್ಚಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಕಾಸರಗೋಡು ನಿವಾಸಿಯನ್ನು ಕೋಜಿಕ್ಕೋಡ್ನ ಕರಿಪ್ಪೂರ್ ವಿಮಾನ ನಿಲ್ದಾಣದಿಂದ ಅಧಿಕಾರಿಗಳು ವಶಕ್ಕೆ ತೆಗೆದು ಕೊಂಡಿದ್ದಾರೆ.

ಕಾಸರಗೋಡಿನ ಹಂಝ ಬಂಧಿತ ಆರೋಪಿ. ಈತನಿಂದ 12. 25 ಲಕ್ಷ ರೂ . ಮೌಲ್ಯದ 245 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಟ್ರಾಲಿ ಬ್ಯಾಗ್ನ ಟಯರ್ ನಲ್ಲಿ ಬಚ್ಚಿಟ್ಟು ಚಿನ್ನಾಭರಣವನ್ನು ಸಾಗಿಸುತ್ತಿದ್ದನು. ಸೋಮವಾರ ಸಂಜೆ ದುಬಾಯಿ ಯಿಂದ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಈತ ಬಂದಿಳಿದಿದ್ದನು.