ಮಂಗಳೂರು ಸೆ 24: ಗೌರಿ ಲಂಕೇಶ್ ಗೆ ಬಿದ್ದ ಗುಂಡು ನಾಳೆ ನನಗೂ ಬೀಳಬಹುದು ಎಂದು" ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ನಾರಾಯಣ ಗುರು ವಿಚಾರ ಕಮ್ಮಟ ವತಿಯಿಂದ ನಗರದ ಸೇಂಟ್ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಕಳದಲ್ಲಿ ನಡೆದ ಆರ್ ಎಸ್ ಎಸ್ ಸಭೆಯಲ್ಲಿ ನನ್ನನ್ನು ಮಟ್ಟ ಹಾಕುವ ಚರ್ಚೆ ನಡೆಸಲಾಗಿದೆ ಈ ಕುರಿತ ಮಾಹಿತಿ ಗುಪ್ತಚರ ಇಲಾಖೆಯಿಂದ ಲಭ್ಯವಾಗಿದೆ'ಎಂದಿದ್ದಾರೆ. ಇನ್ನು ಈ ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಕೂಡಾ ಭಾಗವಹಿಸಿದ್ದರು. ಅಲ್ಲಿಯೇ ಯಾವ ರೀತಿ "ಮಟ್ಟುವನ್ನು ಮಟ್ಟ" ಹಾಕಬೇಕು ಎಂಬ ಚರ್ಚೆ ನಡೆದಿದೆ ಎಂಬುದಾಗಿ ಗುಪ್ತದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ' ಎಂದರು.
ಆದರೆ ನನಗೆ ಸಾವಿನ ಬಗ್ಗೆ ಭಯವಿಲ್ಲ, ನಾವು ಮಾಡಬೇಕಾದ ಕೆಲಸ ಬಹಳಷ್ಟಿದೆ. ಅತೃಪ್ತ ಆತ್ಮಗಳಾಗಿ ಸಾಯಬಾರದು' ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.