ಕಾರ್ಕಳ, ಅ. 27 (DaijiworldNews/MB) : ಶಾಸಕ, ಸಂಸದೆ ಅವರ ಬೆಂಬಲದೊಂದಿಗೆ ಕಾರ್ಕಳ ಪುರಸಭೆಯ ಆಡಳಿತ ಬಿಜೆಪಿಯ ಪಾಲಾಗಿದೆ.

ಕಾರ್ಕಳ ಪುರಸಭೆಯ ಅಧ್ಯಕ್ಷರಾಗಿ ಸುಮ, ಉಪಾಧ್ಯಕ್ಷರಾಗಿ ಪಲ್ಲವಿ
ಕಾರ್ಕಳ ಪುರಸಭಾ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳಿದ್ದು, ಬಿಜೆಪಿ-ಕಾಂಗ್ರೆಸ್ ಪಕ್ಷಗಳು ತಲಾ 11 ಸ್ಥಾನ ಪಡೆದು, ಪಕ್ಷೇತರ- 1 ಸ್ಥಾನ ಪಡೆದುಕೊಂಡಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಹಾಗೂ ಸಂಸದರಿಬ್ಬರಿಗೂ ಮತದಾನ ಹಕ್ಕು ಇದ್ದುದರಿಂದ ಅವರಿಬ್ಬರು ಮತದಾನದಲ್ಲಿ ಪಾಲ್ಗೊಂಡು ಬಿಜೆಪಿ ಪರ ಮತ ಚಲಾಯಿಸಿದರು.
ಹೊರಗುಳಿದ ಪಕ್ಷೇತರ
ಬಿಜೆಪಿಯ ಭದ್ರಕೋಟೆಯಾಗಿ ಶ್ರೀನಿವಾಸ ನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಸಾಧಿಸಿದ ಲಕ್ಷ್ಮೀ ನಾರಾಯಣ ಮಲ್ಯ ಅವರು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ನಾಲ್ಕು ನಿಮಿಷ ತಡವಾಗಿ ಬಂದಿರುವುದರಿಂದ ಅವರಿಗೆ ಮತದಾನ ಮಾಡಲು ಅವಕಾಶ ಸಿಗದೆ ಹೊರಗೆ ನಿಲ್ಲಬೇಕಾಯಿತು. ಮತದಾನದಲ್ಲಿ ಪಾಲ್ಗೊಳ್ಳುವುದಕ್ಕೆ ಖುದ್ದು ಅವರೇ ನಿರಾಸಕ್ತಿ ತೋರಿದರೆಂಬುದು ಅವರ ಆಪ್ತವಲಯದಲ್ಲಿ ಕೇಳಿಬರುತ್ತಿದೆ.
ಕಾಂಗ್ರೆಸ್-ಬಿಜೆಪಿ ತಲಾ 11 ಮಂದಿ ಸದಸ್ಯರು ಹೊಂದಿದ್ದರು. ಅಧ್ಯಕ್ಷ ಸ್ಥಾನಕೆಕ ನಳಿನಿ ಆಚಾರ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಭಾ ನಾಮಪತ್ರ ಸಲ್ಲಿಸಿದ್ದರು.