ಕಾಸರಗೋಡು, ಅ. 27 (DaijiworldNews/MB) : ಎರಡನೇ ದಿನವೂ ಕಾಸರಗೋಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಮಂಗಳವಾರ ಜಿಲ್ಲೆಯಲ್ಲಿ 65 ಮಂದಿಗೆ ಸೋಂಕು ದೃಢಪಟ್ಟಿದೆ.

64ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದ್ದು ಓರ್ವ ಹೊರ ರಾಜ್ಯದಿಂದ ಬಂದವರಾಗಿದ್ದಾರೆ.
213 ಮಂದಿ ಗುಣಮುಖರಾಗಿದ್ದಾರೆ. 17961 ಮಂದಿಗೆ ಈವರೆಗೆ ಸೋಂಕು ದೃಢಪಟ್ಟಿದೆ. 15,886 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 181 ಮಂದಿ ಮೃತಪಟ್ಟಿದ್ದಾರೆ.