ಮಂಗಳೂರು, ಅ. 28 (DaijiworldNews/MB) : ದುಬೈನಿಂದ ಅಕ್ರಮ ಚಿನ್ನ ತರುತ್ತಿದ್ದ ಪ್ರಯಾಣಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದಿದ್ದಾನೆ.

ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಅಬುಬಕ್ಕರ್ ಸಿದ್ದಿಕ್ ಎಂದು ಗುರುತಿಸಲಾಗಿದ್ದು ಆತ ದುಬೈನಿಂದ ಮಂಗಳೂರಿಗೆ ಬಂದಿದ್ದು ಆತ ಚಿನ್ನ ಸಾಗಿಸುತ್ತಿರುವುದು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ವೇಳೆ ಎಂದು ತಿಳಿದು ಬಂದಿದೆ.
ಅಬುಬಕ್ಕರ್ ಸಿದ್ದಿಕ್ ಪೌಡರ್ ರೂಪದಲ್ಲಿ ಚಿನ್ನ ಅಡಗಿಸಿಟ್ಟು ತರುತ್ತಿದ್ದ ಎಂದು ತಿಳಿದು ಬಂದಿದೆ. ತಪಾಸಣೆ ನಡೆಸಿದ ವೇಳೆ ಆತನ ದೇಹದಲ್ಲಿ 634 ಗ್ರಾಮ್ ಚಿನ್ನ ಪತ್ತೆಯಾಗಿದೆ.
32.96 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.