ಕಾಸರಗೋಡು, ಅ.28 (DaijiworldNews/PY): ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳಕ್ಕೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿ ಮೂಲದ ಯುವಕನೋರ್ವನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ ಮಾಗಡಿಯ ನೀಲಕಂಠಪ್ಪ (21) ಬಂಧಿತ ಆರೋಪಿ.
ಬದಿಯಡ್ಕ ಕನಕಪಾಡಿಯ ಕ್ವಾಟರ್ಸ್ನಲ್ಲಿ ವಾಸವಾಗಿದ್ದ ಈತನ ವಿರುದ್ಧ ಪೋಕ್ಸೋ ಕಾಯ್ದೆಯಂತೆ ಮೊಕದ್ದಮೆ ದಾಖಲಿಸಲಾಗಿತ್ತು.
ಸೆಪ್ಟ೦ಬರ್ನಲ್ಲಿ ಈತನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಕರ್ನಾಟಕ ಮೂಲದ ಬಾಲಕಿಯೋರ್ವಳನ್ನು ಕರೆ ತಂದು ಈತ ಕನಕಪಾಡಿಯ ಕ್ವಾಟರ್ಸ್ನಲ್ಲಿ ನೆಲೆಸಿದ್ದನು. ಆದರೆ ಪರಿಸರವಾಸಿಗಳು ಸಂಶಯ ತೋರಿ ಚೈಲ್ಡ್ ಲೈನ್ಗೆ ದೂರು ನೀಡಿದ್ದು, ಬಳಿಕ ತನಿಖೆ ನಡೆಸಿದಾಗ ಈಕೆ ಅಪ್ರಾಪ್ತೆ ಎಂದು ತಿಳಿದು ಬಂದಿತ್ತು. ಚೈಲ್ಡ್ ಲೈನ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದರು. ಈ ನಡುವೆ ಆರೋಪಿ ತಲೆ ಮರೆಸಿಕೊಂಡಿದ್ದನು. ಎರಡು ತಿಂಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.