ಬಂಟ್ವಾಳ, ಅ. 28 (DaijiworldNews/SM): ಸ್ಕೂಟರ್ ಗೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.

ಬಿಸಿರೋಡು ನಿವಾಸಿ ಸಿವಿಲ್ ಇಂಜಿನಿಯರ್ ವಸಂತ ಪೂಜಾರಿ(55) ಮೃತ ಪಟ್ಟ ವ್ಯಕ್ತಿ. ಕಲ್ಲಡ್ಕದಿಂದ ಬಿಸಿರೋಡಿಗೆ ಬರುವ ವೇಳೆ ಎದುರಿನಿಂದ ಬಂದ ಗೂಡ್ಸ್ ಟೆಂಪೋ ಟೆಂಪೋ ಡಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡ ಸ್ಕೂಟರ್ ಸವಾರನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸವಾರ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಟ್ರಾಫಿಕ್ ಎಸ್ ಐ ರಾಜೇಶ್ ಕೆ.ವಿ.ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.