ಮಂಗಳೂರು, ಮೇ 27 : ನಗರದಲ್ಲಿ ಹೆಚ್ಚಾಗುತ್ತಿರುವ ಬೈಕ್ ಕಾರು ಕಳ್ಳತನವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸ್ ಇಲಾಖೆ ಕಳ್ಳತನದ ಬೆನ್ನು ಹತ್ತಿದಾಗ, ಪೊಲೀಸರಿಗೆ ಅಚ್ಚ ರಿಕಾದಿತ್ತು. ಕಾರಣ ವಾಹನ ಕಳ್ಳರ ತಂಡದ ಎಲ್ಲರೂ ಕೇರಳದಲ್ಲಿ ಇಂಜಿನಿಯರಿಂಗ್, ಪಿಯುಸಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು !
ಕಳವಿನಲ್ಲಿ 9 ಮಂದಿಯ ತಂಡವಿದ್ದು, 7 ಮಂದಿ ಇದೀಗ ಬಂಧಿತರಾಗಿದ್ದಾರೆ. ಈ ಕಳ್ಳರ ತಂಡದಲ್ಲಿರುವ ಬಹುತೇಕ ಮಂದಿ ಅಪ್ರಾಪ್ತ ವಯಸ್ಕರು. ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುವುದು ಬಿಟ್ಟು, ಎಲ್ಲರೂ ಸುಲಭದಲ್ಲಿ ಹಣ ಸಂಪಾದಿಸುವ ದಾರಿ ಕಂಡು ಹುಡುಕಿಕೊಂಡಿದ್ದರು. ಬಂಧಿತರಲ್ಲಿ ಬೈಕ್ ಕಳವಿನ ಮಾಸ್ಟರ್ ಮೈಂಡ್ ಆಗಿದ್ದ ವಿದ್ಯಾರ್ಥಿ ಟ್ಯೂಬ್ನಲ್ಲಿ ಸರ್ಚ್ ಮಾಡಿ ಪಾರ್ಕ್ ಮಾಡಿದ್ದ ಕಾರು, ಬೈಕ್ ಕಳವು ಮಾಡುವುದು ಹೇಗೆ ಅಭ್ಯಾಸಿದ್ದ.
ಕೇರಳದ ಪಯ್ಯನ್ನೂರು, ಕಾಞಂಗಾಡು, ಕಾಸರಗೋಡು ಸುತ್ತಮುತ್ತದ ವಿದ್ಯಾರ್ಥಿಗಳು ಈ ತಂಡದಲ್ಲಿದ್ದು, ತಮ್ಮ ಊರಿನಲ್ಲಿ ಕಳ್ಳತನ ಮಾಡಿದರೆ, ಸುಲಭದಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯದಿಂದ ಮಂಗಳೂರಿನತ್ತ ಈ ಚೋರರ ಕಣ್ಣು ಬಿದ್ದಿತ್ತು. ಮಾರ್ಚ್ ವೇಳೆಗೆ ಮಂಗಳೂರಿಗೆ ಬಂದ ಇವರು ಎರಡುವರೆ ತಿಂಗಳ ಅಂತರದಲ್ಲಿ 20ಕ್ಕೂ ಅಧಿಕ ಬೈಕ್ಗಳನ್ನು ಕಳವು ಮಾಡಿದ್ದರು.ಈ ಪೈಕಿ 3 ಬೈಕ್ ಹಾಗೂ 1 ಕಾರು ವಶಪಡಿಸಿಕೊಳ್ಳಲಾಗಿದೆ. ಉಳಿದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಕಾರ್ಯ ನಿರತರಾಗಿದ್ದಾರೆ.