ಶಿರ್ವ, ಮೇ 27 : ತುಳುನಾಡಿನಲ್ಲಿ ದೈವಗಳ ಕಾರಣಿಕವನ್ನು ಎಲ್ಲರೂ ಭಯಭಕ್ತಿಯಿಂದ ನಂಬಿಕೊಂಡು, ಬರುತ್ತಿರುವ ಈ ಸಂದರ್ಭದಲ್ಲಿ ಕೆಲ ಯುವಕರು ದೈವವನ್ನು ಕೆಣಕಲು ಹೋಗಿ ತಾವೇ ಸಾವಿನ ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಪ್ರಸಂಗ ಕಟಪಾಡಿಯ ಜನತೆಯನ್ನು, ಬೆಚ್ಚಿಬೀಳಿಸಿದೆ.
ಕಟಪಾಡಿಯಲ್ಲಿ ಮುಸ್ಲಿಂ ಹಾಗೂ ಹಿಂದುಗಳು ಸೌಹಾರ್ದದಿಂದ ಬದುಕುತ್ತಿದ್ದ ಇದಕ್ಕೆ ಕಪ್ಪು ಚುಕ್ಕಿ ಎಂಬಂತೆ ಮುಸ್ಲಿಂ ಕುಟುಂಬದ ಯುವಕನೊಬ್ಬ, ಕಟಪಾಡಿ ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಹಣ ಕದ್ದಿದ್ದು ಮಾತ್ರವಲ್ಲದೆ ಅಲ್ಲಿ ಅಪಚಾರವನ್ನು ಎಸಗಿದ್ದನ್ನು. ಇದನ್ನು ಕೊರಗಜ್ಜನ ದರ್ಶನದ ಘಳಿಗೆಯಲ್ಲಿ ಆತನೇ ಬಾಯಿಬಿಟ್ಟಿದ್ದಾನೆ .
ಕಟಪಾಡಿಯ ಪೇಟೆಬೆಟ್ಟುವಿನಲ್ಲಿ ಜನವರಿ ತಿಂಗಳಲ್ಲಿ ನಡೆದ ವಿಜೃಂಬಣೆಯ ನೇಮೋತ್ಸವದ ಬಳಿಕ ದೈವಸ್ಥಾನದ ಆಡಳಿತ ಮಂಡಳಿಯವರು ಕಾಣಿಕೆ ಹುಂಡಿಯನ್ನು ತೆರೆದ ವೇಳೆ ಅದಕ್ಕೆ ಬೇಡದ ಕೆಲವು ವಸ್ತುಗಳನ್ನು ಹಾಕಿ ಹಣ ತೆಗೆದಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಆಕ್ರೋಶಗೊಂಡ ಆಡಳಿತ ಮಂಡಳಿಯವರು ದೈವದ ಎದುರು ಪ್ರಾರ್ಥನೆ ಮಾಡಿ, ಕೃತ್ಯ ಎಸಗಿದವರಿಗೆ ತಕ್ಕ ಪಾಠ ಕಲಿಸುವಂತೆ ಪ್ರಾರ್ಥಿಸಿದ್ದರು. ಇದೇ ಸಂದರ್ಭದಲ್ಲಿ ಹುಂಡಿಗೆ ಅಪಚಾರ ಎಸಗಿದ ಯುವಕನೊಬ್ಬ ಧಿಡೀರನೇ, ಕೈ ಕಾಲು ಸ್ವಾಧೀನ ಕಳೆದುಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ. ಕೊನೆಗೂ ಪ್ರಶ್ನೆ ಮುಖೇನ ವಿಮರ್ಶೆ ಮಾಡಿದಾಗ ಕಟಪಾಡಿ ಬಬ್ಬು ಸ್ವಾಮಿ ಕ್ಷೇತ್ರದಲ್ಲಿ ಅಪಚಾರ ಎಸಗಿರುವುದು ತಿಳಿದು ಬಂತು. ಅದನ್ನೂ ಆ ಯುವಕ ಒಪ್ಪಿಕೊಂಡಾಗ ಕೂಡಲೇ ಮನೆಯವರು ಭಗವಾನ್ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಬಂದು ಕೊರಗಜ್ಜನ ಮೊರೆ ಹೋದರು.
ಈ ಪ್ರಕಾರವಾಗಿ ಇತಿಹಾಸವೆಂಬಂತೆ ಮುಸ್ಲಿಂ ಸಮುದಾಯದ ಕುಟುಂಬದವರೇ ದೈವಕ್ಕೆ ನಡೆಸಿದ ದರ್ಶನ ಸೇವೆಯಲ್ಲಿ ಶುಕ್ರವಾರ ಅಪಾರ ಹಿಂದೂ ಮುಸ್ಲಿಂ ಬಂಧುಗಳು ಸಾಕ್ಷಿಯಾದರು. ಸಾವಿರಾರು ಮುಂದಿ ಅಲ್ಲಿ ನೆರೆದು ಕೊರಗಜ್ಜನ ಅಭಯ ನುಡಿಗಾಗಿ ಕಾತರದಿಂದ ಬೆಳಗ್ಗಿನಿಂದಲೇ ಕಾದು ಕುಳಿತರು. ದರ್ಶನ ಸೇವೆಯಲ್ಲಿ ಬಬ್ಬುಸ್ವಾಮಿ , ಕೊರಗಜ್ಜ ದೈವದ ನುಡಿಯಂತೆ ಎಲ್ಲಾ ವಿಚಾರಗಳನ್ನು ಒಪ್ಪಿಕೊಂಡ ಯುವಕ ಆರೋಗ್ಯವನ್ನು ಸುಧಾರಿಸುವ ಅಭಯ ನೀಡಿತು.
ಇದೇ ಸಂದರ್ಭದಲ್ಲಿ ಕಾಣಿಕೆ ಡಬ್ಬಿಗೆ ಅಪಚಾರ ಎಸಗುವ ವೇಳೆ ಒಬ್ಬ ಅಜ್ಜ ಬಂದು ತಪ್ಪು ಮಾಡದಂತೆ ಸೂಚನೆ ನೀಡಿದರೂ ನೀವು ನಿಮ್ಮ ಕೆಲಸ ಮುಂದುವರಿಸಿದ್ದಾರೆ. ಆ ಅಜ್ಜ ಬೇರೆ ಯಾರು ಅಲ್ಲ ನಾನೇ ಕೊರಗಜ್ಜ ಎಂದಾಗ ಅಲ್ಲಿ ನೆರೆದವರಿಗೆ ಮೈ ಒಮ್ಮೆ ಜುಮ್ಮೆನಿಸಿದ ಅನುಭವಾಗಿತ್ತು. ಇದೇ ವೇಳೆ ನಿನ್ನೊಂದಿಗೆ ಇನ್ನು ಕೆಲವು ಯುವಕರು ಶಾಮೀಲಾಗಿದ್ದು, ಅವರು ಕೂಡ್ ಆಬೇರೆ ಬೇರೆ ರೀತಿಯಲ್ಲಿ ತೊಂದರೆಯಿಂದ ಬಳಲುತ್ತಿದ್ದು, ಅವರ ಬಗೆಗೂ ಸುಳಿವು ನೀಡಿ ತಪ್ಪೊಪ್ಪಿಕೊಳ್ಳುವಂತೆ ಅಭಯ ವಾಕ್ಯ ನೀಡಿತು.