ತೊಕ್ಕೊಟ್ಟು, ಅ. 29 (DaijiworldNews/SM): ಇಲ್ಲಿನ ಫ್ಲೈ ಓವರ್ ನಲ್ಲಿ ಮಂಗಳವಾರದಂದು ನಡೆದ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ ಬಳಿಕ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಬದಲಾದ ಸಂಚಾರ ವ್ಯವಸ್ಥೆಯಲ್ಲೂ ಅಪಘಾತ ಸಂಭವಿಸಿದೆ. ಇಲ್ಲಿನ ಕಾಪಿಕಾಡ್ ತಿರುವಿನಲ್ಲಿ ಬುಲೆಟ್ ಬೈಕ್ ಬಸ್ಸಿನಡಿಗೆ ಬಿದ್ದಿದ್ದು, ಬುಲೆಟ್ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಉಳ್ಳಾಲಕ್ಕೆ ತಿರುಗುತ್ತಿದ್ದ ಖಾಸಗಿ ಬಸ್ಸಿನಡಿಗೆ ಬುಲೆಟ್ ಬಿದ್ದಿದೆ. ಈ ವೇಳೆ ಬುಲೆಟ್ ಸವಾರ ಅಪಾಯದಿಂದ ಪಾರಾಗಿದ್ದಾರೆ. ಮುಂಬೈಯಿಂದ ಮೌಷೂಕ್ ಎಂಬವರು ಬುಲೆಟ್ ಮೂಲಕ ಕೇರಳಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಉಳ್ಳಾಲಕ್ಕೆ ತೆರಳುವ ಬಸ್ ಡಿಕ್ಕಿ ಹೊಡೆದಿದೆ. ಅದೃಷ್ಟವಷಾತ್ ಮೌಷೂಕ್ ಅವರು ಅಪಾಯದಿಂದ ಪಾರಾಗಿದ್ದಾರೆ.
ಬದಲಾದ ಸಂಚಾರ ವ್ಯವಸ್ಥೆಯಲ್ಲೂ ಅಪಘಾತ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.