ಮಂಗಳೂರು, ಅ. 29 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿದ್ದು, ಗುಣಮುಖರಾಗುವವರ ಸಂಖ್ಯೆ ಉತ್ತಮವಾಗಿದೆ. ಗುರುವಾರದಂದು 96 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 424 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ:
ದ. ಕ. ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೊಳಪಟ್ಟವರು-255507 ಮಂದಿ
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ನೆಗೆಟಿವ್ ಪ್ರಕರಣಗಳು-225497
ಇಲ್ಲಿಯ ತನಕ ಪತ್ತೆಯಾದ ಒಟ್ಟು ಪಾಸಿಟಿವ್ ಕೇಸ್ ಗಳು-30010
ಗುರುವಾರದಂದು ಪತ್ತೆಯಾದ ಪಾಸಿಟಿವ್ ಪ್ರಕರಣಗಳು-96
ಜಿಲ್ಲೆಯಲ್ಲಿ ಗುರುವಾರ ಗುಣಮುಖರಾದವರು-424 ಮಂದಿ
ಒಟ್ಟು ಗುಣಮುಖರಾಗಿ ಬಿಡುಗಡೆಯಾದವರು-27443
ಗುರುವಾರದಂದು ಮತ್ತೆ ಇಬ್ಬರು ಸೋಂಕಿಗೆ ಬಲಿ
ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸಾವು-673
ಪ್ರಸ್ತುತ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು-1894 ಮಂದಿ