ಮಂಗಳೂರು, ಅ.30 (DaijiworldNews/PY): ವೃದ್ದೆಯೋರ್ವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅ.30ರ ಶುಕ್ರವಾರ ನಡೆದಿದೆ.

ಸಾಂದರ್ಭಿಕ ಚಿತ್ರ
ಮೃತರನ್ನು ಸಂಕೊಳಿ ನಿವಾಸಿ ಉಷಾ (60) ಎಂದು ಗುರುತಿಸಲಾಗಿದೆ.
ಮೃತರ ಶವ ಉಚ್ಚಿಲ ಕಡತೀರದ ಬಳಿ ಪತ್ತೆಯಾಗಿದೆ. ಈ ವೃದ್ದೆ ಈ ಹಿಂದೆ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ವಿಫಲವಾಗಿದೆ ಎಂದು ಹೇಳಲಾಗಿದೆ.
ಘಟನೆಯ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.