ಮಂಗಳೂರು, ಮೇ 28: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ ಮೇ 28 ರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದವರಾದ ಇವರು ಮುಂಗಾರು ಪತ್ರಿಕೆ ಮೂಲಕ ಪತ್ರಿಕಾ ಛಾಯಾಗ್ರಹಣ ಆರಂಭಿಸಿದ್ದರು.
ಗ್ರಾಮೀಣ ಪ್ರದೇಶವಾದ ವಿಟ್ಲದಲ್ಲಿ 12.7.1961ರಲ್ಲಿ ವಿ. ವಾಸಪ್ಪ ಹಾಗೂ ಗಂಗಮ್ಮ ದಂಪತಿಗಳ ದ್ವಿತೀಯ ಪುತ್ರನಾಗಿ ಜನಿಸಿದ ಕೇಶವ ವಿಟ್ಲ ತಮ್ಮ ಬಾಲ್ಯದ ವಿದ್ಯಾಬ್ಯಾಸವನ್ನು ಇಲ್ಲಿಯೇ ಮುಗಿಸಿ 1979ರಿಂದ ಸ್ಟುಡಿಯೋ ಮತ್ತು ಕಲರ್ಲ್ಯಾಬ್ನಲ್ಲಿ ತಾಂತ್ರಿಕ ಪರಿಣತಿಯನ್ನು ಪಡೆದು 1984ರಲ್ಲಿ ಮುಂಗಾರು ಪತ್ರಿಕೆಯ ಮೂಲಕ ಪತ್ರಿಕಾ ಛಾಯಗ್ರಾಹಕರಾಗಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
1996 ರಿಂದ ’ಇಂಡಿಯನ್ ಎಕ್ಸ್ ಪ್ರೆಸ್ ’ ಬಳಗದಲ್ಲಿ ಸೇರಿ ಹಲವಹಲವು ವರುಷ ತಮ್ಮ ಪತ್ರಿಕೆ ವೃತ್ತಿಯನ್ನು ನಡೆಸಿ ತದನಂತರ ಪ್ರೀಲಾನ್ಸರ್ ಪತ್ರಿಕಾ ಛಾಯಾಗ್ರಾಹಕರಾಗಿ ದಿ ಟೆಲಿಗ್ರಾಫ್, ಹಿಂದುಸ್ತಾನ್ ಟೈಮ್ಸ್ ಮುಂತಾದ ಹಲವಾರು ಪತ್ರಿಕೆಗಳಿಗೆ ತನ್ನ
ಛಾಯಾಚಿತ್ರಗಳನ್ನು ಪೂರೈಸುತ್ತಿದ್ದರು.
1997ರಲ್ಲಿ ಇವರು ಕನ್ನಡಪ್ರಭದಲ್ಲಿ ಪ್ರಾರಂಭಿಸಿದ ವೀ..ಕ್ಷಣ ಎಂಬ ಏಕವ್ಯಕ್ತಿ ಛಾಯಾಂಕಣ ದೇಶದ ಪತ್ರಿಕೆಯಲ್ಲೇ ಪ್ರಥಮ ಏಕವ್ಯಕ್ತಿ ಛಾಯಾಂಕಣವಾಗಿದೆ.
1997ರ ಶ್ರೇಷ್ಟ ಸುದ್ದಿ ಛಾಯಾಗ್ರಾಹಕ ಪ್ರಶಸ್ತಿ
2011ರಲ್ಲಿ ಬಲಿಯೇಂದ್ರಾ ಪುರಸ್ಕಾರ
2012ರಲ್ಲಿ ತು ಳು ನಾಡ ಸಿರಿ ಶಸ್ತಿ
2015ರಲ್ಲಿ ಪ್ರೆಸ್ ಕ್ಲಬ್ ಬೆಂಗಳೂರು , ಜೀವಮಾನ ಸಾಧನ ಶಸ್ತಿ
2015ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
2017ರಲ್ಲಿ ನಂದನ್ನಾರ್ ಪ್ರಶಸ್ತಿ
1988ರಲ್ಲಿ "ಬದುಕಿನ ನೋಟಗಳು " ಛಾಯಾಚಿತ್ರ ಪ್ರದರ್ಶನ (ಮಂಗಳೂರು)
1988ರಲ್ಲಿ Illusion& Reality ಛಾಯಾಚಿತ್ರ ಪ್ರದರ್ಶನ (ಬೆಂಗಳೂರು )
2003ರಲ್ಲಿThe Faithfull ಛಾಯಾಚಿತ್ರ ಪ್ರದರ್ಶನ (ಬೆಂಗಳೂರು )(ಬೀದಿ ನಾಯಿಗಳ ಬಗ್ಗೆ ಪ್ರಪಂಚದಲ್ಲೇ ಪ್ರಥಮ)
2008 ರಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ "ಕರ್ನಾಟಕ
ವಾಟರ್ ಸ್ನೇಪ್’ ಛಾಯಾ ಪ್ರದರ್ಶನ
2017ರಲ್ಲಿ ಕರ್ನಾಟಕದ ನೈ ಸರ್ಗಿಕ ಸಂಪತ್ತಿನ ಕಾಫಿ ಟೇಬಲ್ ಬುಕ್ ಪ್ರಕಟಣೆ