ಕಾಸರಗೋಡು,ಅ.30 (DaijiworldNews/HR): ಜಿಲ್ಲೆಯಲ್ಲಿ ಶುಕ್ರವಾರ 133 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 130 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದ್ದು, ವಿದೇಶದಿಂದ ಬಂದ ಓರ್ವ ಹಾಗೂ ಹೊರರಾಜ್ಯಗಳಿಂದ ಬಂದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನು ಓರ್ವ ಆರೋಗ್ಯ ಕಾರ್ಯಕರ್ತನಿಗೆ ಸೋಂಕು ತಗಲಿದ್ದು,148 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 18, 484 ಮಂದಿಗೆ ಸೋಂಕು ಸೋಂಕು ದೃಢಪಟ್ಟಿದ್ದು, 16, 576 ಮಂದಿ ಗುಣಮುಖರಾಗಿದ್ದಾರೆ.
ಇನ್ನು 4693 ಮಂದಿ ನಿಗಾದಲ್ಲಿದ್ದು, 186 ಮಂದಿ ಗುಣಮುಖರಾಗಿದ್ದಾರೆ.