ಮಂಗಳೂರು, ಆ. 30, (DaijiworldNews/SM): ಮಂಗಳೂರಿನ ಫಳ್ನೀರ್ ಬಳಿ ಗುಂಡಿನ ದಾಳಿ ನಡೆದಿದೆ. ಅಪರಿಚಿತ ಯುವಕರ ತಂಡವೊಂದು ಹೊಟೇಲ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.






ಫಳ್ನೀರ್ ಬಳಿಯ ಎಂ.ಎಫ್.ಸಿ ಹೊಟೇಲ್ ಮತ್ತು ಫ್ರೆಶ್ ಮಾರ್ಟ್ ಬಳಿ ದಾಳಿ ನಡೆದಿದೆ. ಅಲ್ಲದೆ, ಇದೇ ವೇಳೆ ಹೊಟೇಲ್ ಗೆ ನುಗ್ಗಿದ ತಂಡ ಇಬ್ಬರು ಸಿಬ್ಬಂದಿಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿದೆ.
ಘಟನೆಯಲ್ಲಿ ಹೊಟೇಲ್ ನ ಗಾಜು, ಪೀಠೋಪಕರಣಗಳು ಧ್ವಂಸಗೈಯಲಾಗಿದೆ. ಇನ್ನು ಗುಂಡಿನ ದಾಳಿ ವೇಳೆ ಒಂದು ಗುಂಡು ಸಿಬ್ಬಂದಿಯೊಬ್ಬರಿಗೆ ತಗುಲಿದ್ದು, ಅವರು ಗಾಯಗೊಂಡಿದ್ದಾರೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.