ಕಾಸರಗೋಡು, ಆ. 30, (DaijiworldNews/SM): ಕೆಲ ತಿಂಗಳ ಹಿಂದೆ ಭಾರೀ ಪ್ರಮಾಣದ ಮದ್ಯ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಇಂದು ಕುಂಬಳೆ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ಮಧೂರಿನ ಆರ್. ಕೆ. ದಿನೇಶ್(30) ಹಾಗೂ ಬಂದ್ಯೋಡು ವೀರನಗರದ ರಜಿನ್ ಕುಮಾರ್(22) ಬಂಧಿತರು. ರಜಿನ್ ಕುಮಾರ್ ನು ಕಳೆದ ಜೂನ್ ನಲ್ಲಿ ಕುಂಬಳೆ ಅನಂತಪುರದಲ್ಲಿ ಕುಂಬಳೆ ಪೊಲೀಸರು 672 ಬಾಟ್ಲಿ ಮದ್ಯ ಹಾಗೂ 144 ಪ್ಯಾಕೆಟ್ ಮದ್ಯ ವಶಪಡಿಸಿಕೊಂಡ ಪ್ರಕರಣದ ಆರೋಪಿ ಯಾಗಿದ್ದಾನೆ. ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದಾಗ ಬೆನ್ನಟ್ಟಿದಾಗ ಕಾರು ಬಿಟ್ಟು ಪರಾರಿಯಾಗಿದ್ದು ಕಾರನ್ನು ತಪಾಸಣೆ ನಡೆಸಿದಾಗ ಮದ್ಯ ಪತ್ತೆಯಾಗಿತ್ತು.
ದಿನೇಶ್ ಇನ್ನೊಂದು ಪ್ರಕರಣದ ಆರೋಪಿಯಾಗಿದ್ದು, ಜುಲೈ ತಿಂಗಳಲ್ಲಿ ಕುಂಬಳೆ ಕೊಡ್ಯಮ್ಮೆ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡು ಕಾರು ಬಿಟ್ಟು ಪರಾರಿಯಾಗಿದ್ದ. ಕಾರಿನಲ್ಲಿದ್ದ 1248 ಬಾಟ್ಲಿ ಮದ್ಯ ವಶಪಡಿಸಿಕೊಳ್ಳಲಾಗಿತ್ತು. ಇಬ್ಬರು ಕಾಸರಗೋಡು ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ತಿರಸ್ಕರಿಸಿತ್ತು.
ಬಳಿಕ ಇಬ್ಬರು ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಎ . ಎಸ್.ಐ ಪಿ. ಸೋಮಯ್ಯ ರವರ ಸಮ್ಮುಖದಲ್ಲಿ ಇಬ್ಬರು ಶರಣಾಗಿದ್ದಾರೆ.