ಮಂಗಳೂರು, ಆ. 30, (DaijiworldNews/SM): ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನೀಡಲ್ಪಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದೆ. ವಿವಿಧ ಕ್ಷೇತ್ರದ ಸುಮಾರು ೩೮ ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದ ಪ್ರಮುಖರು:
ಸಾಹಿತ್ಯ/ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ವಿಶ್ರಾಂತ ಪ್ರಾಧ್ಯಾಪಕರದ ಪ್ರೊ. ಎ. ವಿ. ನಾವಡ ಆಯ್ಕೆಯಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ. ಯು.ವಿ ಶೆಣೈ ಆಯ್ಕೆಯಾಗಿದ್ದಾರೆ.
ಸಮಾಜಸೇವೆಗಾಗಿ ನವೋದಯ ಮಿತ್ರ ಕಲಾ ವೃಂದ (ರಿ) ನೆತ್ತರಕೆರೆ, ಬಂಟ್ವಾಳ,ಎಂ. ಸುಬ್ರಹ್ಮಣ್ಯ ಭಟ್, ಬಿನ್ ಎಂ ಸೀತರಾಮ ಭಟ್, ಶ್ರೀರಾಮ ನಿಲಯ, ಮಂಜಿನಡ್ಕ, ಸಜಿಪ ಮುನ್ನೂರುಗ್ರಾಮ, ಬಂಟ್ವಾಳ ತಾಲೂಕು, ಆಯ್ಕೆಯಾಗಿದೆ.
ಸಾಹಸ ಹಾಗೂ ಕ್ರೀಡಾ ಕ್ಷೇತ್ರದಿಂದ ಅಬ್ದುಲ್ ಸತ್ತಾರ್ ಆಯ್ಕೆಯಾಗಿದ್ದಾರೆ. ದೊಡ್ಡಣ್ಣ ಬರೆಮೇಲು, ಸುಳ್ಯ ಅವರು ಕ್ರೀಡಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ರಂಗಭೂಮಿಕಲಾವಿದ, ಕಿರುತೆರೆ ಮತ್ತು ಚಲನಚಿತ್ರಕಲಾವಿದರ ಕ್ಷೇತ್ರದಿಂದ ಬಿ. ಚೇತನ್ರೈ ಮಾಣಿ ಆಯ್ಕೆಯಾಗಿದ್ದಾರೆ.
ಕೃಷಿ ಕ್ಷೇತ್ರದಿಂದ ಕೆ. ವಿಶ್ವನಾಥ ಪೈ ಐರ್ವನಾಡು,ಸುಳ್ಯ ತಾಲೂಕು ಇವರು ಆಯ್ಕೆಯಾಗಿದ್ದಾರೆ.
ವಿದುಷಿ ನಯನ ವಿ ರೈ, ಸುಳ್ಯಪದವು ಪುತ್ತೂರು, ನೃತ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮ ವಿಭಾಗದಿಂದ ಬಿ.ಟಿ. ರಂಜನ್ ಶೆಣೈ, ಪುತ್ತೂರು, ಜಿನ್ನಪ್ಪ ಗೌಡ ಆಯ್ಕೆಯಾಗಿದ್ದಾರೆ.
ದೃಶ್ಯ ಮಾಧ್ಯಮ ಕ್ಷೇತ್ರದಿಂದ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಆಯ್ಕೆಯಾಗಿದ್ದಾರೆ.
ಸಾಮಾಜ ಸೇವೆಗಾಗಿ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮಂಜೇಶ್ವರ ಆಯ್ಕೆಯಾಗಿದೆ.
ಕಲಾ ಕ್ಷೇತ್ರದಿಂದ ಚಂದ್ರ ಶೇಖರ ಹೆಗ್ಡೆ ಪಡ್ನೂರು ಗ್ರಾಮ ,ಪುತ್ತೂರು ಆಯ್ಕೆಯಾಗಿದ್ದಾರೆ.
ವಾದ್ಯ ಕಲಾವಿದರ ಕ್ಷೇತ್ರದಿಂದ ಸುಂದರ ದೇವಾಡಿಗ, ಅಳದಂಗಡಿ ಬೆಳ್ತಂಗಡಿ ಆಯ್ಕೆಯಾಗಿದ್ದಾರೆ.
ವೈದ್ಯಕೀಯ ಸೇವೆಗಾಗಿ ಡಾ| ವೇಣುಗೋಪಾಲ ಶರ್ಮ ಎಸ್, ಗುರುವಾಯನ ಕೆರೆ, ಬೆಳ್ತಂಗಡಿ ಅಯ್ಕೆಯಾಗಿದ್ದಾರೆ.
ಸಮಾಜ ಸೇವೆಗಾಗಿ ವೀರಕೇಸರಿ ಧರ್ಮಸ್ಥಳ ,ಬೆಳ್ತಂಗಡಿ ಆಯ್ಕೆಯಾಗಿದೆ.
ಇತಿಹಾಸ ಕ್ಷೇತ್ರದ ಕೊಡುಗೆಗಾಗಿ ಡಾ| ವೈ ಉಮಾನಾಥ ಶೆಣೈ, ಬೆಳ್ತಂಗಡಿ ಆಯ್ಕೆಯಾಗಿದ್ದಾರೆ.
ಯಕ್ಷಗಾನ ಹಾಗೂ ರಂಗಭೂಮಿ ಕ್ಷೇತ್ರದ ಕೊಡುಗೆಗಾಗಿ ಗಣೇಶ ಕೊಲೆಕಾಡಿ, ಅತಿಕಾರಿಬೆಟ್ಟುಗ್ರಾಮ, ಮುಲ್ಕಿ, ಮೂಡಬಿದ್ರೆ ಆಯ್ಕೆಯಾಗಿದ್ದಾರೆ.
ಸಮಾಜ ಸೇವೆಗಾಗಿ ಕದ್ರಿ ಕ್ರಿಕೇಟರ್ಸ್ (ರಿ), ಕದ್ರಿ ದೇವಸ್ಥಾನ ರಸ್ತೆ, ಮಂಗಳೂರು ಆಯ್ಕೆಯಾಗಿದೆ.