ಉಡುಪಿ, ಅ.31 (DaijiworldNews/PY): ಕಲ್ಲು ಸಾಗಾಟ ಮಾಡುತ್ತಿದ್ದ ಟೆಂಪೊವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶಿರ್ವಾದಲ್ಲಿ ಅ.31ರ ಶನಿವಾರ ಬೆಳಗ್ಗೆ ನಡೆದಿದೆ.


ಶಿರ್ವಾದಿಂದ ಉಡುಪಿ ಕಡೆಗೆ ಬರುತ್ತಿದ್ದ ಟೆಂಪೊ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ. ಟೆಂಪೊ ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡಿದ್ದಾನೆ.
ಟೆಂಪೊ ಮಾರ್ಗದ ನಡುವೆ ಪಲ್ಟಿಯಾಗಿ ಬಿದ್ದ ಕಾರಣ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಸ್ಥಳಕ್ಕೆ ತೆರಳಿದ ಶಿರ್ವಾ ಪೊಲೀಸರು ರಸ್ತೆ ತೆರವುಗೊಳಿಸಿದ್ದಾರೆ.