ಮಂಗಳೂರು, ಅ.31 (DaijiworldNews/PY): ಮಂಗಳೂರಿನ ಫಳ್ನೀರ್ ಬಳಿ ಗುಂಡಿನ ದಾಳಿ ನಡೆಸಿದ ಆರೋಪಿಗಳಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ.


ಅಪರಿಚಿತ ಯುವಕರ ತಂಡವೊಂದು ಹೊಟೇಲ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ನಡೆದಿದ್ದು, ಈ ವೇಳೆ ಅವರನ್ನು ಸ್ಥಳೀಯರು ಪತ್ತೆಹಚ್ಚಿದ್ದಾರೆ. ಅಲ್ಲದೇ, ತಕ್ಷಣವೇ ಆರೋಪಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಫಳ್ನೀರ್ ಬಳಿಯ ಎಂ.ಎಫ್.ಸಿ ಹೊಟೇಲ್ ಮತ್ತು ಫ್ರೆಶ್ ಮಾರ್ಟ್ ಬಳಿ ದಾಳಿ ನಡೆದಿದೆ. ಅಲ್ಲದೆ, ಇದೇ ವೇಳೆ ಹೊಟೇಲ್ಗೆ ನುಗ್ಗಿದ ತಂಡ ಇಬ್ಬರು ಸಿಬ್ಬಂದಿಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿದೆ.
ಘಟನೆಯಲ್ಲಿ ಹೊಟೇಲ್ನ ಗಾಜು, ಪೀಠೋಪಕರಣಗಳು ಧ್ವಂಸಗೈಯಲಾಗಿದೆ. ಇನ್ನು ಗುಂಡಿನ ದಾಳಿ ವೇಳೆ ಒಂದು ಗುಂಡು ಸಿಬ್ಬಂದಿಯೊಬ್ಬರಿಗೆ ತಗುಲಿದ್ದು, ಅವರು ಗಾಯಗೊಂಡಿದ್ದಾರೆ.
ಇದಾದ ಬಳಿಕ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಅಲರ್ಟ್ ಆಗಿದ್ದು, ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.