ಮಂಗಳೂರು, ಅ.31 (DaijiworldNews/PY): ರಸ್ತೆ ಬದಿಯಲ್ಲಿ ಕಸ ಬಿಸಾಡಿ ನಗರ ನೈರ್ಮಲ್ಯವನ್ನು ಕೆಡದಂತೆ ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ಬೋಳೂರು ಕಾರ್ಪೊರೇಟರ್ ಜಗದೀಶ್ ಶೆಟ್ಟಿ ಅವರು ನಿರಂತರ ಮನೆ ಮನೆ ಅಭಿಯಾನ ಮಾಡುತ್ತಿದ್ದಾರೆ.

ಕಸ ಮುಕ್ತ ನಗರ ನಿರ್ಮಿಸಲು ಒಣ ಮತ್ತು ಹಸಿ ಕಸವನ್ನು ಡೋರ್ ಟು ಟೋರ್ ಮಾದರಿಯಲ್ಲಿ ಸಂಗ್ರಹಣೆ ಮಾಡಬೇಕು ಎಂದು 2016ರಲ್ಲೇ ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ) ನಿಯಮ ಜಾರಿಗೊಳಿಸಿದೆ.
ಹಸಿ ಮತ್ತು ಒಣ ಕಸ ವಿಂಗಡಣೆ ಬಗ್ಗೆ ನಿರಂತರ ಅಭಿಯಾನದೊಂದಿಗೆ ರಸ್ತೆ ಬದಿಯಲ್ಲಿ ಮನೆ ಕಸ ಬಿಸಾಡಿ ನಗರ ಸುಚಿತ್ವ ಹಾಳು ಮಾಡುವ ವಿಕೃತ ಮನೋಭಾವದವರಿಗೆ ಜಗದೀಶ್ ಶೆಟ್ಟಿ ಬೋಳೂರು ಅವರಿಂದ ನಿರಂತರ ಸ್ವಚ್ಚತೆಯ ಪಾಠ ನಡೆಯುತ್ತಿರುವುದು ಶ್ಲಾಘನೀಯ ಮತ್ತು ಮಾದರಿಯಾಗಿದೆ.