ಮಂಗಳೂರು, ಅ. 31 (DaijiworldNews/HR): ಪುತ್ತೂರು ತಾಲೂಕಿನ ಕೈಪನಾಡುಕದ ಇಚಿಲಂಪಾಡಿಯ ಚಾರ್ಲ್ಸ್ ಕೆ ಸಿ ವಿಶ್ವ ದಾಖಲೆ ಮಾಡಿದ ವಿದ್ಯಾರ್ಥಿ.


ಸೆಪ್ಟೆಂಬರ್ 20 ರಂದು ಚಾರ್ಲ್ಸ್ ಕೆ ಸಿ ಅವರು ಎ 1 ಗಾತ್ರದ 4 ಹಾಳೆಗಳು, ಗಮ್, ಬ್ರಷ್, ಮತ್ತು ಕಾಗದದ ಬೂದಿಯನ್ನು ಬಳಸಿ 5 ನಿಮಿಷಗಳ ಅವಧಿಯಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ರಚಿಸಿದ್ದಾರೆ.
ಚಾರ್ಲ್ಸ್ ಕೆ ಸಿ ಅವರು ಇದೀಗ ವಿಶ್ವದ ಅತೀ ವೇಗದ ಕಾಗದದ ಬೆಂಕಿ ಬೂದಿ ಕಲಾವಿದರಾಗಿದ್ದಾರೆ.