ಕಾರ್ಕಳ, ಅ. 31 (DaijiworldNews/HR): ಪುಲ್ಕೇರಿ ಬೈಪಾಸ್-ಸಾಣೂರು ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ರೀತಿಯಲ್ಲಿ ಗಾಯಗೊಂಡು ಆಸ್ಪತ್ರೆ ಗೆ ದಾಖಲಾಗಿದ್ದಾರೆ.


ಕಾರ್ಕಳದಿಂದ ಸಾಣೂರಿಗೆ ಕಟ್ ಇಡ್ಲಿ ಸಿದ್ದ ಪಡಿಸಿ ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ ಯುವಕ ಘಟನೆಯಲ್ಲಿ ಗಾಯಗೊಂಡವರು.
ದಾನಸಾಲೆಯ ನಿವಾಸಿ ಸಿಯೋನ್ ಡಿಸೋಜಾ(21) ಗಾಯಾಳುವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದ ತೀವ್ರತೆಗೆ ದ್ವಿಚಕ್ರ ಮೋಟಾರ್ ವಾಹನ ಸಂಪೂರ್ಣ ನಜುಗುಜ್ಜಾಗಿದೆ. ಕಾರಿನ ಮುಂಭಾಗ ಹಾನಿಯಾಗಿದೆ.
ಕಾರ್ಕಳ ನಗರ ಠಾಣಾ ಪೊಲೀಸರು ಘಟನಾ ಸ್ಥಳ ಅಗಮಿಸಿದ್ದಾರೆ.