ಮೇ, 28 : ನಿಫಾ ವೈರಸ್, ಕೇರಳ ರಾಜ್ಯವನ್ನು ಅಕ್ಷರಶಃ ತತ್ತರಿಸುವಂತೆ ಮಾಡಿದೆ. ದಿನ ಕಳೆದಂತೆ ವೈರಸ್ ಭೀತಿ ತೀವ್ರವಾಗುತ್ತಿದ್ದು, ಭಾನುವಾರವೂ 22 ವರ್ಷದ ಯುವಕನನ್ನು ನಿಫಾ ಬಲಿತೆಗೆದುಕೊಂಡಿದೆ. ಅಬಿನ್ ಎನ್ನುವ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದು, ಕೇರಳದಲ್ಲಿ ನಿಫಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 14 ಕ್ಕೆ ಏರಿದೆ.
ಇನ್ನು ನಿಫಾ ವೈರಸ್ ಇದು ಭಾರತದ ವ್ಯಾಪಾರದ ಮೇಲೂ ತನ್ನ ಪ್ರಭಾವ ಬೀರಿದೆ. ನಿಫಾ ಬೀತಿಯಿಂದಾಗಿ ಕೇರಳದಿಂದ ರಫ್ತಾಗುತ್ತಿದ್ದ ಹಣ್ಣು ಮತ್ತು ತರಕಾರಿಗಳನ್ನು ನಿಷೇಧಿಸಲಾಗಿದೆ. ನಿಫಾ ವೈರಸ್ ಹರಡುವ ಭೀತಿಯಿಂದ ಈ ಹಣ್ಣುಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಇದು ಭಾರತದ ರಪ್ತು ವ್ಯಾಪಾರದ ಮೇಲೂ ಪರಿಣಾಮ ಬೀರಿದೆ.
ವಿಶ್ವ ಆರೋಗ್ಯ ಸಂಸ್ಥೆಯೂ ಈ ವೈರಸ್ ಬಾವಲಿಗಳ ಮೂತ್ರ ವಿಸರ್ಜನೆ ಮತ್ತು ವಿಸರ್ಜನೆಯೊಂದಿಗೆ ಹರಡುತ್ತದೆ ಎಂದು ಹೇಳುತ್ತಿದ್ದು, ವಿಶೇಷವಾಗಿ ಬಾವಲಿಗಳು ಮರದ ಮೇಲೆ ತಿನ್ನುವ ಆ ಹಣ್ಣುಗಳ ಮೂಲಕ ವೈರಸ್ ಹರಡುತ್ತದೆ ಎಂದು ಹೇಳಲಾಗಿದೆ.
ಮಾಧ್ಯಮದ ವರದಿಯ ಪ್ರಕಾರ ನಿಪಾ ವೈರಸ್, ಭಯದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬೆಹ್ರೆನ್ ದೇಶಗಳು ದೇವರನಾಡು ಕೇರಳದ ಹಣ್ಣುಗಳು ಮತ್ತು ತರಕಾರಿಗಳನ್ನು ನಿಷೇಧಿಸಲಾಗಿದೆ. ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎರಡೂ ದೇಶಗಳು ವರದಿ ನೀಡಿದೆ. ನಿಫಾ ವೈರಸ್ ಅಪಾಯವನ್ನು ವಿವರಿಸಿ, ಬಾಳೆ ಹಣ್ಣುಗಳು, ಮಾವಿನ ಹಣ್ಣುಗಳು, ದ್ರಾಕ್ಷಿಗಳು. ಇದಲ್ಲದೆ, ಕರ್ಜೂರ ರಫ್ತು ನಿಷೇಧಿಸಲಾಗಿದೆ. ಇದರ ಜೊತೆಗೆ, ತರಕಾರಿಗಳನ್ನು ಸಹ ನಿಷೇಧಿಸಲಾಗಿದೆ. ನಿಪಾ ವೈರಸ್ ರಫ್ತು ಮಾಡುವ ಕಾರಣದಿಂದಾಗಿ, ವ್ಯವಹಾರಕ್ಕೆ ನಷ್ಟವಾಗಿದೆ.