ಕಾಸರಗೋಡು, ನ. 01 (DaijiworldNews/MB) : ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಶಾಸಕ ಸೇರಿದಂತೆ ಪ್ರಕರಣದ ಆರೋಪಿಗಳನ್ನು ಜಾರಿ ನಿರ್ದೇಶನಾಲಯ (ಎನ್ಫೋರ್ಸ್ಮೆಂಟ್) ವಿಚಾರಣೆ ನಡೆಸಲಿದೆ. ಇದರಿಂದ ಶಾಸಕರಾದ ಖಮರುದ್ದೀನ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪೆನಿಗಾಗಿ ಸುಮಾರು 750 ಕ್ಕೂ ಅಧಿಕ ಮಂದಿಯಿಂದ 130 ಕೋಟಿ ರೂ. ಗೂ ಅಧಿಕ ಠೇವಣಿ ಪಡೆದು ವಂಚಿಸಿದ ಈ ಪ್ರಕರಣದ ಬಗ್ಗೆ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ವಂಚನೆಗೆ ಸಂಬಂಧಪಟ್ಟಂತೆ ಈಗಾಗಲೇ 98 ದೂರುಗಳು ಲಭಿಸಿವೆ.
ಈ ನಡುವೆ ಹವಾಲ ಹಣದ ವಹಿವಾಟು ನಡೆದಿರುವ ಬಗ್ಗೆಯೂ ಅನುಮಾನಗಳು ಉಂಟಾಗಿದ್ದು, ಇದರಿಂದ ಜಾರಿ ನಿರ್ದೇಶನಾಲಯ ಈಗಾಗಲೇ ಮಾಹಿತಿ ಕಲೆ ಹಾಕತೊಡಗಿದ್ದು, ಶಾಸಕರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಇದಲ್ಲದೆ ಕಂಪೆನಿ ನಿರ್ದೇಶಕರುಗಳನ್ನೂ ವಿಚಾರಣೆಗೆ ಒಳಪಡಿಸಲಿದೆ.