ಉಡುಪಿ, ನ.01 (DaijiworldNews/PY): ಬ್ರಹ್ಮಾವರದ ಅಮ್ಮುಂಜೆಯಲ್ಲಿ ಇತ್ತಂಡಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾದ ಘಟನೆ ಅ.31ರ ಶನಿವಾರ ರಾತ್ರಿ ನಡೆದಿದೆ.


ತಂಡಗಳ ಸದಸ್ಯರು ಮದ್ಯದ ಅಮಲಿನಲ್ಲಿದ್ದರು ಎಂದು ಹೇಳಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಈಗಾಗಲೇ ಆರು ಮಂದಿಯನ್ನು ವಶಕ್ಕೆ ತೆಗದುಕೊಳ್ಳಲಾಗಿದೆ. ಸೂರಜ್, ಆಲ್ವಿನ್, ಮೋಹಿತ್, ಬಾಲಕೃಷ್ಣ, ಮಣಿಕಾಂತ ಹಾಗೂ ಪಪ್ಪು ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿಲ್ಲ.
ಈ ನಡುವೆ ಮೂರು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ವಾಹನಗಳ ಮೇಲೆ ಶಸ್ತ್ರಾಸ್ತ್ರಗಳ ಬಳಕೆಯ ಗುರುತುಗಳಿವೆ.
ಇತ್ತಂಡಗಳ ನಡುವಿನ ಜಗಳದಿಂದಾಗಿ ಈ ಘಟನೆ ನಡೆದಿದೆ. ಎರಡು ತಂಡಗಳ ನಡುವೆ ವೈಷಮ್ಯವಿದ್ದು, ಶನಿವಾರ ರಾತ್ರಿ ನಡೆದ ಗಲಾಟೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ ಎನ್ನಲಾಗಿದೆ.
ಒಂದು ತಂಡ ಕೊಳಾಲ್ಗಿರಿಯಿಂದ ಬಂದಿದ್ದು, ಇನ್ನೊಂದು ತಂಡ ಹೊರಗಿನಿಂದ ಬಂದವರಾಗಿದ್ದಾರೆ. ಹೊರಗಿನಿಂದ ಬಂದ ತಂಡದವರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಈ ವೇಳೆ ವಾಹನಗಳನ್ನು ಸುಟ್ಟು ಹಾಕಲಾಗಿದ್ದು, ಇದಕ್ಕೆ ಹೆದರಿದ ಸ್ಥಳೀಯ ತಂಡ ಪರಾರಿಯಾಗಿದ್ದಾರೆ ಎನ್ನಲಾಗಿದೆ.