ಕಾಸರಗೋಡು, ನ.02 (DaijiworldNews/PY): ಜಿಲ್ಲೆಯ ಎರಡು ಕಡೆಗಳಲ್ಲಿ ಭಾರೀ ಪ್ರಮಾಣದ ವಿದ್ಯುತ್ ಕಳವು ಪತ್ತೆ ಹಚ್ಚಲಾಗಿದೆ.

ಸಾಂದರ್ಭಿಕ ಚಿತ್ರ
ವಿದ್ಯುತ್ ಮಂಡಳಿಯ ವಿಶೇಷ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು ಆರು ಲಕ್ಷ ರೂ.ಗಳ ಕಳವು ಪತ್ತೆ ಹಚ್ಚಲಾಗಿದೆ.
ಚೆರ್ಕಳ ವಿದ್ಯುತ್ ಕಚೇರಿ ವ್ಯಾಪ್ತಿಯಲ್ಲಿ ಅಕ್ಟೋಬರ್ 30 ರಂದು ಮುಂಜಾನೆ ನಾಲ್ಕು ಗಂಟೆಗೆ ನಡೆಸಿದ ತಪಾಸಣೆಯಿಂದ ತೈವಳಪ್ಪಿನ ಎಂ.ಎ ಮುಹಮ್ಮದ್ ಅವರ ಮನೆಯಲ್ಲಿ ಕಳವು ಪತ್ತೆಹಚ್ಚಲಾಗಿದೆ.
ಸೀತಾಂಗೋಳಿ ವಿದ್ಯುತ್ ಕಚೇರಿಯ ಊಜಂಪದವಿನ ಅಬ್ದುಲ್ ರಹಮಾನ್ ಅವರ ಮನೆಗೆ ದಾಳಿ ನಡೆಸಿ ಅಕ್ರಮ ಪತ್ತೆ ಹಚ್ಚಲಾಗಿದೆ. ಎರಡೂ ಕಡೆಗಳಲ್ಲಿ ಮೀಟರ್ಗೆ ನೀಡಲಾಗಿದ್ದ ಸಂಪರ್ಕ ಕಡಿತಗೊಳಿಸಿ ನೇರವಾಗಿ ನೀಡಿರುವುದು ಕಂಡುಬಂದಿದೆ.