ಉಳ್ಳಾಲ, ನ. 02 (DaijiworldNews/MB) : ಉಳ್ಳಾಲ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಸೇರಿದ್ದು ಚಿತ್ರ ಚಂದ್ರಕಾಂತ್ ಅಧ್ಯಕ್ಷೆಯಾಗಿ ಹಾಗೂ ಅಯೂಬ್ ಮಂಚಿಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ನ್ಯಾಯಾಲಯ ಹೊರಡಿಸಿದ್ದ ತಡೆಯಾಜ್ಞೆ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಖಾಲಿ ಉಳಿದಿದ್ದ ಉಳ್ಳಾಲ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ನವೆಂಬರ್ 2 ರ ಸೋಮವಾರ ಮಧ್ಯಾಹ್ನ 1.30 ಗಂಟೆಗೆ ಚುನಾವಣೆ ನಡೆಯಿತು.
ಕಾಂಗ್ರೆಸ್ನ ಚಿತ್ರ ಚಂದ್ರಕಾಂತ್ ಮತ್ತು ಅಯೂಬ್ ಮಂಚಿಲ ಅಲ್ಲದೆ, ಎಸ್ಡಿಪಿಐನಿಂದ ಝರೀನಾ ಬಾನು ಹಾಗೂ ಬಿಜೆಪಿಯಿಂದ ರೇಷ್ಮಾ ಜಗದೀಶ್ ಅಧ್ಯಕ್ಷ ಸ್ಥಾನಕ್ಕೆ, ಜೆಡಿ (ಎಸ್) ನ ರಮೀಝ್ ಕೋಡಿ, ಜಬ್ಬರ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಚುನಾವಣೆ ನಡೆದಿದ್ದು ಎರಡು ಸ್ಥಾನಗಳು ಕೂಡಾ ಕಾಂಗ್ರೆಸ್ ಪಾಲಾಗಿದೆ.