ಮಂಗಳೂರು,ಸೆ.04: ನೇತ್ರಾವತಿ ನದಿಯಲ್ಲಿ ಸ್ನಾನಕ್ಕಿಳಿದ ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಕೊಣಾಜೆಯ ಇನೋಳಿ ನಡುಗುಡ್ದೆಯಲ್ಲಿ ನಡೆದಿದೆ.ಅಡ್ಯಾರು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಬೆಳ್ತಂಗಡಿಯ ವಿಖಿಲ್ (21), ಬಿಹಾರದ ಶುಭಂ (22), ಚಿತ್ರದುರ್ಗದ ಶ್ರೀರಾಮ್ (21) ನೀರು ಪಾಲಾದ ವಿದ್ಯಾರ್ಥಿಗಳು. ಈ ಪೈಕಿ ವಿಖಿಲ್ ಮೃತದೇಹ ಪತ್ತೆಯಾಗಿದೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಸ್ನಾನ ಮುಗಿಸಿ ಹಿಂದಿರುಗುವ ವೇಳೆ ಶ್ರೀರಾಮ್ ಕಾಲು ಜಾರಿ ನದಿಗೆ ಬಿದ್ದಿದ್ದಾರೆನ್ನಲಾಗಿದೆ. ಶ್ರೀರಾಮ್ ಅವರನ್ನು ರಕ್ಷಿಸಲು ಮುಂದಾದ ವಿಖಿಲ್ ಮತ್ತು ಶುಭಂ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಮೂಲಗಳಿಂದ ತಿಳಿದಿದು ಬಂದಿದೆ. ಒಟ್ಟು 8 ಮಂದಿ ವಿದ್ಯಾರ್ಥಿಗಳು ಸ್ನಾನ ಮಾಡಲೆಂದು ನೀರಿಗಿಳಿದಿದ್ದಾರೆ.ಈ ಪೈಕಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.ಉಳಿದ ಐವರು ವಿದ್ಯಾರ್ಥಿಗಳನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ..ಘಟನೆ ಕುರಿತು ಕೊಣಾಜೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ