ಬಂಟ್ವಾಳ, ನ. 03 (DaijiworldNews/MB) : ಭಂಡಾರಿಬೆಟ್ಟುವಿನ ವಸ್ತಿ ಅರ್ಪಾಟ್ಮೆಂಟ್ನಲ್ಲಿ ಸುರೇಂದ್ರ ಬಂಟ್ವಾಳ್ನನ್ನು ಕೊಚ್ಚಿ ಕೊಲೆ ನಡೆಸಿದ ಘಟನೆಗೆ ಸಂಬಂಧಿಸಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಸಹಕಾರ ನೀಡಿದ ಆರೋಪಿಯಾದ ಪ್ರತೀಕ್ ಬೆಳ್ತಂಗಡಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.





ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸಹಕಾರ ನೀಡಿದ ಹಿನ್ನಲೆ ಪ್ರತೀಕ್ ಬೆಳ್ತಂಗಡಿ, ಜಯೇಶ್ ಯಾನೆ ಸಚ್ಚುನನ್ನು ಬಂಧಿಸಲಾಗಿದ್ದು ಮಂಗಳವಾರ ಇಬ್ಬರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಲಯ ಬಂಧನ ವಿಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ 5 ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು. ಈಗಾಗಲೇ ಆರೋಪಿಗಳಾದ ಸತೀಶ್ ಕುಲಾಲ್, ಗಿರೀಶ್ ಕಿನ್ನಿಗೋಳಿ, ಆಕಾಶ್ ಭವವ್ ಶರಣ್, ವೆಂಕಟೇಶ್ ಪೂಜಾರಿ, ಪ್ರದೀಪ್, ಶರೀಫ್, ದಿವರಾಜ್, ರಾಜೇಶ್ ಮತ್ತು ಅನಿಲ್ ಪಂಪ್ವೆಲ್ನನ್ನು ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.